ಸಂಘಗಳ ಜತೆ ಸೇರಿ ಉಡುಪಿ ಸುತ್ತಲಿನ ಗ್ರಾಮಸ್ಥರಿಗೆ ದಿನಸಿ ವಿತರಿಸಿದ ಸ್ಯಾಂಡಲ್​ವುಡ್​ ನಟಿ ಶುಭಾ ಪೂಂಜ..

Shubha
Published on

ಲಾಕ್​ಡೌನ್​ ಹಿನ್ನೆಲೆಯಲ್ಲಿ ಸ್ಯಾಂಡಲ್​ವುಡ್​ ನಟಿ ಶುಭಾ ಪೂಂಜ ಉಡುಪಿಯಲ್ಲಿದ್ದಾರೆ. ಮನೆಯಲ್ಲಿ ಕೂರದೆ, ಹಳ್ಳಿಗಳಿಗೆ ಸಂಚಾರ ಆರಂಭಿಸಿದ್ದಾರೆ. ಹಾಗಂತ, ಲಾಕ್​ಡೌನ್​ ಉಲ್ಲಂಘಿಸಿ ಸುತ್ತಾಡುತ್ತಿದ್ದಾರೆ ಅಂತಲ್ಲ. ಬದಲಿಗೆ ಉಡುಪಿ, ಕಾಫು ಸೇರಿ ಸುತ್ತಮುತ್ತಲಿನ ಒಂದಷ್ಟು ಪ್ರದೇಶಗಳನ್ನು ಕೆಲವು ಸಂಘಗಳು ಆಯ್ದುಕೊಂಡು ಗ್ರಾಮಸ್ಥರಿಗೆ ಅವಶ್ಯಕ ಪದಾರ್ಥಗಳನ್ನು ಹಂಚಿಕೆ ಮಾಡುತ್ತಿದ್ದವು. ಹಾಗೆ ಹಂಚಿಕೆ ಮಾಡುತ್ತಿದ್ದಾಗ ಶುಭಾ ಅವರ ಹುಟ್ಟೂರಿಗೂ ಸಂಘದವರು ಆಗಮಿಸಿದ್ದರು. ಆಗ ಅವರ ಜತೆ ಶುಭಾ ಕೈ ಜೋಡಿಸಿ ಸಂಘಗಳ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಸಮಾಜ ಸೇವಾ ಸಮೀತಿ ಮತ್ತು ಜನ ಸಂಪರ್ಕ ಸಮೀತಿ ವತಿಯಿಂದ ನಡೆದ ವಿತರಣೆ ಕಾರ್ಯಕ್ಕೆ ಶುಭಾ ಕೈ ಜೋಡಿಸಿದ್ದು, ಈಗಾಗಲೇ ಸಂಘದವರೊಂದಿಗೆ ತೆರಳಿ ನೂರಾರು ಮನೆಗಳಿಗೆ ರೇಷನ್​ ವಿತರಿಸಿದ್ದಾರೆ. ಅವರ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net