ಭೂಮಿಯ ಮೇಲೆ ನಡೆಯಲು ಕಲಿಯುತ್ತಿರುವ ಶುಭಾಂಶು ಶುಕ್ಲಾ! ವಿಡಿಯೋ ವೈರಲ್​... Shubhanshu Shukla

Shubhanshu Shukla
Published on

Shubhanshu Shukla: ಕಳೆದ ವಾರವಷ್ಟೇ ಬಾಹ್ಯಾಕಾಶ ಯಾನದಿಂದ ಕ್ಯಾಪ್ಟನ್​​ ಶುಭಾಂಶು ಶುಕ್ಲಾ ವಾಪಾಸಾಗಿದ್ದಾರೆ. ಇದೀಗ ಅವರು ಭೂಮಿಯ ಮೇಲೆ ನಡೆಯಲು ಕಲಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಜೂನ್ 25 ರಂದು ಆಕ್ಸಿಯಮ್ -4 ಕಾರ್ಯಾಚರಣೆಯ ಭಾಗವಾಗಿ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಹಾರಾಟ ನಡೆಸಿದ ನಾಲ್ಕು ಸಿಬ್ಬಂದಿಯಲ್ಲಿ ಶುಭಾಂಶು ಕೂಡ ಒಬ್ಬರು.

ವಿಡಿಯೋದಲ್ಲೇನಿದೆ?

ಐಎಸ್‌ಎಸ್‌ನಲ್ಲಿ ಸುಮಾರು 18 ದಿನಗಳನ್ನು ಕಳೆದ ನಂತರ ಶುಭಾಂಶು ಜುಲೈ 15 ರಂದು ಸುರಕ್ಷಿತವಾಗಿ ಭೂಮಿಗೆ ಬಂದಿದ್ದಾರೆ. ಹಾಗೆ ಮಂಗಳವಾರ (ಜುಲೈ22) ಶುಕ್ಲಾ ಅವರು ಮತ್ತೆ ನಡೆಯಲು ಪ್ರಯತ್ನಿಸುತ್ತಿರುವ ವಿಡಿಯೋವನ್ನು ಇಮ್ಮ ಇನ್‌ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಪ್ರತಿಯೊಂದು ಹೆಜ್ಜೆ ಇಡುವಾಗಲೂ ಅವರಿಗೆ ಇಬ್ಬರು ಸಹಾಯ ಮಾಡುವುದನ್ನು ನೋಡಬಹುದು.

ನನ್ನ ಆರೋಗ್ಯದ ಬಗ್ಗೆ ನನಗೆ ಸಾಕಷ್ಟು ಸಂದೇಶಗಳು ಬರುತ್ತಿವೆ. ನಾನು ಬೇಗನೆ ಚೇತರಿಸಿಕೊಳ್ಳಬೇಕೆಂದು ಆಶಿಸುತ್ತೇನೆ. ನಿಮ್ಮೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ನಮ್ಮ ದೇಹವು ಸೂಕ್ಷ್ಮ ಗುರುತ್ವಾಕರ್ಷಣೆಯನ್ನು ಹೊಂದಿರುವುದರಿಂದ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಶುಭಾಂಶು ಅವರು ತಮ್ಮ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಶುಭಾಂಶು ಹಾಗೂ ಇತರ ಮೂವರು ಗಗನಯಾತ್ರಿಗಳು ವೈದ್ಯಕೀಯ ಚಿಕಿತ್ಸೆಗಾಗಿ ಒಳಪಡಿಸುವುದರಿಂದ ಅವರನ್ನು ಜುಲೈ 23ರವರೆಗೆ ಕ್ವಾರಂಟೈನ್​​ ಮಾಡುವುದಾಗಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ಆಕ್ಸಿಯಮ್ -4 ಕಾರ್ಯಾಚರಣೆಯಲ್ಲಿ ಶುಭಾಂಶು ಮೂರು ವಾರಗಳ ಕಾಲ ಅಲ್ಲಿಯೇ ವಾಸ್ತವ್ಯವನ್ನು ಹೂಡಿದ್ದರು. ಗಗನಯಾನ ಯೋಜನೆಯು ಅವರಿಗೆ ಬಾಹ್ಯಾಕಾಶದ ಒಳ್ಳೆಯ ಅನುಭವ ನೀಡಿದೆ. ಅಲ್ಲದೆ, ಈ ಗಗನಯಾನ ದೇಶವನ್ನು ಉತ್ತಮ ಸ್ಥಾನಕ್ಕೆರಿಸಿದೆ. ಹಾಗೆ, ಎಲ್ಲಕ್ಕಿಂತ ಹೆಚ್ಚಾಗಿ, ಭಾರತದ ಬಗ್ಗೆ ಪ್ರಪಂಚಕ್ಕೆ ಒಂದು ದೊಡ್ಡ ಸಂದೇಶ ಸಹ ರವಾನೆಯಾಗಿದೆ. ಈಗ, ಬಾಹ್ಯಾಕಾಶ ವಲಯದಲ್ಲಿ ಭಾರತವು ಕೂಡ ಪ್ರಖ್ಯಾತಿ ಪಡೆದಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಪಿಟಿಐಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net