Shruti Haasan: ಒಪ್ಪಿಕೊಂಡಿದ್ದ ಎರಡು ಚಿತ್ರಗಳಿಂದ ಹಿಂದೆ ಸರಿದ ನಟಿ...ಮತ್ತೆ ವಿರಹವೇ ಎಂದ ಫ್ಯಾನ್ಸ್​!

Actress Shruti Haasan Latest Photoshoot Pics
Actress Shruti Haasan Latest Photoshoot Pics
Published on

ಚೆನ್ನೈ: ಪ್ರೀತಿಯಲ್ಲಿ ವಿಫಲರಾಗಿ ವಿರಹವೇದನೆ ಅನುಭವಿಸಿ ಹಲವು ವರ್ಷ ನಟನೆಯಿಂದ ದೂರ ಉಳಿದಿದ್ದ ನಟಿ ಶ್ರುತಿ ಹಾಸನ್(Shruti Haasan) ಇತ್ತೀಚೆಗಷ್ಟೇ ರೀ ಎಂಟ್ರಿ ಕೊಟ್ಟಿದ್ದಾರೆ. ಇನ್ನೇನು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ ಎನ್ನುವಾಗಲೇ ಆಕೆ ಪರಿಸ್ಥಿತಿ ಮೊದಲಿನಂತಾಗಿದೆ. ಸದ್ಯ ಆಕೆ ಒಪ್ಪಿಕೊಂಡಿರುವ ಎರಡು ಚಿತ್ರಗಳಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದ್ದು ಈ ಸುದ್ದಿ ವೈರಲ್ ಆಗಿದೆ.

ಶ್ರುತಿ ಹಾಸನ್ ಕಾರಣಾಂತರಗಳಿಂದ ಎರಡು ಚಿತ್ರಗಳನ್ನು ಕೈ ಬಿಟ್ಟಿದ್ದಾರೆಯಂತೆ. ಇದರಲ್ಲಿ ಒಂದು ತೆಲುಗು ಚಿತ್ರವಾದರೆ ಇನ್ನೊಂದು ಇಂಗ್ಲಿಷ್ ಚಿತ್ರ. ಸದ್ಯ ಸೂಪರ್ ಸ್ಟಾರ್ ರಜನಿಕಾಂತ್ - ಲೋಕೇಶ್ ಕನಕರಾಜ್ ಕಾಂಬಿನೇಷನ್ ನಲ್ಲಿ ತಯಾರಾಗುತ್ತಿರುವ 'ಕೂಲಿ' ಚಿತ್ರದಲ್ಲಿ ರಜನಿಕಾಂತ್ ಮಗಳ ಪಾತ್ರದಲ್ಲಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ.

ಈ ನಡುವೆ ಅವರು ಸಹಿ ಮಾಡಿದ ಎರಡು ಚಿತ್ರಗಳಿಂದ ಹಿಂದೆ ಸರಿದಿದ್ದು, ಇವುಗಳಲ್ಲಿ ಟಾಲಿವುಡ್ ಹೀರೋ ಅಡವಿ ಶೇಶ್ ಅಭಿನಯದ 'ಡೆಕಾಟ್: ಎ ಲವ್ ಸ್ಟೋರಿ' ಕೂಡ ಒಂದು ಎನ್ನಲಾಗುತ್ತಿದೆ. ಈ ಚಿತ್ರ ಪ್ಯಾನ್ ಇಂಡಿಯಾದ್ದಾಗಿದ್ದು, ತಮಿಳು, ಕನ್ನಡ, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಕಾಣಬೇಕಿತ್ತು. ಅವರ ಪಾತ್ರಕ್ಕೆ ಸಂಬಂಧಿಸಿದ ಸಣ್ಣ ವಿವಾದದಿಂದಾಗಿ ಅವರು ಹೊರಗುಳಿದರು ಎಂದು ಹೇಳಲಾಗುತ್ತಿದೆ.

ಇದಲ್ಲದೆ, ಹಾಲಿವುಡ್ ನಿರ್ದೇಶಕ ಫಿಲಿಪ್ ಜಾನ್ ನಿರ್ಮಿಸುತ್ತಿರುವ ‘ಚೆನ್ನೈ ಸ್ಟೋರೀಸ್’ಎಂಬ ಇಂಗ್ಲಿಷ್ ಸಿನಿಮಾದಿಂದ ಸಹ ಶೃತಿ ಹಿಂದೆ ಸರಿದಿದ್ದಾರೆ. ವಾಸ್ತವವಾಗಿ ಈ ಚಿತ್ರದಲ್ಲಿ ಸಮಂತಾ ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ ಕಾರಣಾಂತರಗಳಿಂದ ಆಕೆ ಹಿಂದೆ ಸರಿದಿದ್ದು, ಅದಾದ ನಂತರ ಶ್ರುತಿ ಹಾಸನ್ ಆಯ್ಕೆಯಾಗಿದ್ದು, ಈಗ ಶೃತಿಯೂ ಆ ಪ್ರಾಜೆಕ್ಟ್‌ನಿಂದ ಹಿಂದೆ ಸರಿದಿದ್ದಾರೆ.

ಸದ್ಯಕ್ಕೆ ಆಕೆಯ ಕೈಯಲ್ಲಿ 'ಕೂಲಿ' ಜೊತೆಗೆ 'ಸಲಾರ್ 2' ಮಾತ್ರ ಇದೆ. ಒಂದೇ ಬಾರಿಗೆ ಎರಡು ಚಿತ್ರಗಳು ಕೈ ಬಿಟ್ಟಿರುವ ಹಿನ್ನೆಲೆಯಲ್ಲಿ ಶ್ರುತಿ ಹಾಸನ್ ಗೆ ಮತ್ತೆ ಏನಾಗಿದೆ? ಮತ್ತೆ ವಿರಹವೇ ಎಂದು ಆಕೆಯ ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net