ಮಾಕನೂರಿನಲ್ಲಿ ಮುಸ್ಲಿಂ ಕುಟುಂಬದಿಂದಲೂ ಶ್ರೀ ರಾಮ ಸ್ಮರಣೆ

22-RNR-04
Published on

ರಾಣೆಬೆನ್ನೂರ: ತಾಲೂಕಿನ ಮಾಕನೂರ ಗ್ರಾಮದಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆ ನಿಮಿತ್ತ ಏರ್ಪಡಿಸಿದ್ದ ಶ್ರೀ ರಾಮ ಸ್ಮರಣೆ ಪೂಜೆಯಲ್ಲಿ ಮುಸ್ಲಿಂ ಕುಟುಂಬದವರು ಭಾಗಿಯಾಗುವ ಮೂಲಕ ಗಮನ ಸೆಳೆದಿದ್ದಾರೆ.
ಅಯೋಧ್ಯೆ ಶ್ರೀ ರಾಮ ಮಂದಿರ ಉದ್ಘಾಟನೆ ನಿಮಿತ್ತ ಗ್ರಾಮದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ನೇತೃತ್ವದಲ್ಲಿ ಗ್ರಾಮಸ್ಥರು ಶ್ರೀರಾಮ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿದರು. ನಂತರ ರಾಮ ಸ್ಮರಣೆ ಮಾಡುತ್ತಿದ್ದರು. ಈ ಸಮಯದಲ್ಲಿ ಮುದೇನೂರ ಗ್ರಾಮದಿಂದ ಬಂದ ಮುಸ್ಲಿಂ ಕುಟುಂಬದವರು ಶ್ರೀ ರಾಮ ಸ್ಮರಣೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು.
ಮುಸ್ಲಿಂ ಕುಟುಂಬದವರು ಧರ್ಮಭೇದ ಮರೆತು ಶ್ರೀರಾಮ ಸ್ಮರಣೆಯಲ್ಲಿ ಪಾಲ್ಗೊಂಡಿರುವುದು ಇತರರಿಗೆ ಮಾದರಿ ಆಯಿತು.
ಗ್ರಾಮಸ್ಥರಾದ ಸತೀಶ ಮಲ್ಲನಗೌಡ್ರ, ಭೀಮಪ್ಪ ಪೂಜಾರ, ಗಂಗಪ್ಪ ಸಾರಥಿ, ಹನುಮಂತಪ್ಪ ಮುದಿಗೌಡರ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net