ತನಿಖೆ ನಡೆಸುತ್ತಿರುವ ಪೊಲೀಸರನ್ನೇ ಬೆಚ್ಚಿಬೀಳಿಸುತ್ತಿವೆ ಅಫ್ತಾಬ್​​ನ ಪೈಶಾಚಿಕ ಕೃತ್ಯಗಳು!

Shraddha Walker Murder
Published on

ನವದೆಹಲಿ: ಲಿವ್-ಇನ್-ರಿಲೇಶನ್​ಶಿಪ್​ನಲ್ಲಿದ್ದ ಪ್ರೇಯಸಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ, ಮೃತದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ, ಫ್ರಿಜ್​​​ನಲ್ಲಿಟ್ಟಿದ್ದ ಆರೋಪಿ ಅಫ್ತಾಬ್ ಅಮೀನ್​​ನನ್ನು ಪೊಲೀಸರು ಬಂಧಿಸಿ, ನಿರಂತರವಾಗಿ ತನಿಖೆಗೆ ಒಳಪಡಿಸಿದ್ದಾರೆ. ಇದೀಗ ತನಿಖೆಯ ನಂತರ ಬೆಚ್ಚಿ ಬೀಳುವಂತಹ ಮಾಹಿತಿಗಳು ಒಂದೊಂದಾಗಿ ಹೊರಬರುತ್ತಿವೆ.

ಆರೋಪಿ ಅಫ್ತಾಬ್ ಅಮೀನ್, ಶ್ರದ್ಧಾಳನ್ನು ಕೊಲೆ ಮಾಡಿ ದೇಹವನ್ನು 35 ತುಂಡುಗಳನ್ನಾಗಿ ಮಾಡಿ ಫ್ರಿಜ್​ನಲ್ಲಿಟ್ಟಿದ್ದ. ನಂತರ 18 ದಿನಗಳ ಅಂತರದಲ್ಲಿ, ಪ್ರತಿ ದಿನ ಮುಂಜಾನೆ 2 ಗಂಟೆಯ ಸುಮಾರಿಗೆ ದೆಹಲಿಯ ಮೆಹರೌಲಿ ಕಾಡಿನಲ್ಲಿ ಮೃತದೇಹದ ತುಂಡುಗಳನ್ನು ಎಸೆದು ಬರುತ್ತಿದ್ದ.

ಇದೀಗ ಕೊಲೆಯಾಗಿ ಹೋಗಿರುವ ಶ್ರದ್ಧಾಳ ಸ್ನೇಹಿತ ರಜತ್ ಶುಕ್ಲಾ ನೀಡಿದ ಹೇಳಿಕೆಯ ಪ್ರಕಾರ, ಶ್ರದ್ಧಾ ಈ ಹಿಂದೆ ಅಫ್ತಾಬ್​ನ ಪ್ರೀತಿಯ ಗುಂಗಿನಿಂದ ಹೊರಬರಲು ಪ್ರಯತ್ನಿಸಿದ್ದಳು ಎಂದು ಹೇಳಿದ್ದಾನೆ. ಬೆಳಗ್ಗೆ ಮೊಬೈಲ್ ನೋಡುತ್ತಿದ್ದಾಗ ಸ್ನೇಹಿತೆ ಶ್ರದ್ಧಾ ಕೊಲೆಯಾಗಿ ಹೋಗಿರುವುದು ಗೊತ್ತಾಗಿದೆ. ಒಂದು ವರ್ಷದಿಂದ ಅಫ್ತಾನ್​ನೊಂದಿಗೆ ಸಂಬಂಧ ಬೆಳೆಸಿದ್ದೇನೆ ಎಂದು 2019ರಲ್ಲಿ ಶ್ರದ್ಧಾ ನನ್ನ ಬಳಿ ಹೇಳಿದ್ದಳು. ಆರಂಭದಲ್ಲಿ ಅವರಿಬ್ಬರು ಸಂತೋಷದಿಂದ ಒಟ್ಟಾಗಿದ್ದರು. ಆದರೆ ನಂತರದಲ್ಲಿ ಅವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿತ್ತು. ಇದರಿಂದ ನಿತ್ಯವೂ ಅಫ್ತಾನ್ ಶ್ರದ್ಧಾಳಿಗೆ ಹೊಡೆಯುತ್ತಿದ್ದ. ಇದರಿಂದ ಅವಳ ಜೀವನ ನರಕ ಸದೃಶ್ಯವಾಗಿತ್ತು. ಹೀಗಾಗಿ ಅಫ್ತಾನ್​​ನಿಂದ ದೂರಾಗಲು ಶ್ರದ್ಧಾ ಬಯಸಿದ್ದಳು. ಆದರೆ ಅದು ಸಾಧ್ಯವಾಗುವ ಮೊದಲೇ ಕೊಲೆಯಾಗಿ ಹೋಗಿದ್ದಾಳೆ ಎಂದು ಸ್ನೇಹಿತ್ ರಜತ್ ಶುಕ್ಲಾ ಹೇಳಿಕೊಂಡಿದ್ದಾನೆ.

ಸದ್ಯದ ಮಾಹಿತಿ ಪ್ರಕಾರ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ. ಶ್ರದ್ಧಾ ಮತ್ತು ಅಫ್ತಾಬ್ ಡೇಟಿಂಗ್ ಆ್ಯಪ್​ನ ಮೂಲಕ ಪರಿಚಯವಾದವರು. ಹೀಗಾಗಿ ಪೊಲೀಸರು ಡೇಟಿಂಗ್​ ಆ್ಯಪ್​ನಲ್ಲಿ ಇವರಿಬ್ಬರ ಚಟುವಟಿಕೆ(History) ಪರಿಶೀಲಿಸುತ್ತಿದ್ದಾರೆ.

ಅಫ್ತಾಬ್ ಅಮೆರಿಕದ ಡೆಕ್ಸ್​​ಟರ್ ಎಂಬ ಕ್ರೈಂ ಕಾರ್ಯಕ್ರಮವನ್ನು ನೋಡಿ ಪ್ರೇರೇಪಿತನಾಗಿದ್ದ. ಅಲ್ಲದೇ, ಚಾಕು ಬಳಸಿಕೊಂಡು ಹೇಗೆ ಕೊಲೆ ಮಾಡಬಹುದು ಎಂಬುದನ್ನು ಆರೋಪಿ ಚೆನ್ನಾಗಿ ಅರಿತುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net