Lawrence Bishnoi ಹಿಟ್​ಲಿಸ್ಟ್​ನಲ್ಲಿ ಶ್ರದ್ಧಾ ವಾಲ್ಕರ್​ ಹತ್ಯೆ ಆರೋಪಿ; ಜೈಲಿನಲ್ಲಿ ಭದ್ರತೆ ಹೆಚ್ಚಿಸಿದ ಪೊಲೀಸರು

Shraddha Bishnoi
Published on

ನವದೆಹಲಿ: ಅಕ್ಟೋಬರ್​ 12ರಂದು ಎನ್​ಸಿಪಿ ನಾಯಕ ಬಾಬಾ ಸಿದ್ದಕ್ಕಿರನ್ನು (Baba Siddique) ಹತ್ಯೆ ಮಾಡಿಸುವ ಮೂಲಕ ವಿಶ್ವದಾದ್ಯಂತ ಸೌಂಡ್​ ಮಾಡಿರುವ ಕುಖ್ಯಾತ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯಿ (Lawrence Bishnoi) ಮುಂದಿನ ಟಾರ್ಗೆಟ್​ ಸಲ್ಮಾನ್​ ಖಾನ್​ ಎಂದು ಹೇಳಲಾಗಿದ್ದು, ಈತನಿಗೆ ಸಂಬಂಧಿಸಿದ ಸುದ್ದಿಗಳು ಸಖತ್​ ವೈರಲ್​ ಆಗುತ್ತಿವೆ. ಇದೀಗ ಶ್ರದ್ಧಾ ವಾಲ್ಕರ್‌ ಹತ್ಯೆ ಆರೋಪಿ ಅಫ್ತಾಬ್‌ ಅಮೀನ್‌ ಪೂನಾವಾಲ, ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಹಿಟ್​ಲಿಸ್ಟ್‌ನಲ್ಲಿದ್ದಾನೆ ಎಂದು ವರದಿಯಾಗಿದ್ದು ದೆಹಲಿ ಕೇಂದ್ರ ಕಾರಾಗೃಹದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಹತ್ಯೆಯಾದ ಎನ್​ಸಿಪಿ ನಾಯಕ ಬಾಬಾ ಸಿದ್ದಕ್ಕಿ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾಗ ಪೊಲೀಸರಿಗೆ ಈ ವಿಚಾರ ಬೆಳಕಿಗೆ ಬಂದಿದ್ದು, ಬಂಧಿತ ಆರೋಪಿಗಳ ಪೈಕಿ ಓರ್ವ ಈ ಬಗ್ಗೆ ಮಾತನಾಡಿದ್ದು, ಪೊಲೀಸರು ದೆಹಲಿ ತಿಹಾರ್​ ಜೈಲಿನಲ್ಲಿರುವ ಅಫ್ತಾಬ್‌ ಸೆಲ್​ಗೆ ಭದ್ರತೆಯನ್ನು ಹೆಚ್ಚಿಸಿದ್ದಾರೆ.

Shraddha Walker

ಈ ಕುರಿತು ಮಾತನಾಡಿರುವ ತಿಹಾರ್​ ಜೈಲಿನ ಹಿರಿಯ ಪೊಲೀಸ್​​ ಆಧಿಕಾರಿಯೊಬ್ಬರು, ಬಿಷ್ಣೋಯಿ (Lawrence Bishnoi) ಗ್ಯಾಂಗ್‌ನಿಂದ ಪೂನಾವಾಲಾಗೆ ಬೆದರಿಕೆಯ ಕುರಿತು ನಮಗೆ ಪೊಲೀಸರು ಅಥವಾ ಭದ್ರತಾ ಏಜೆನ್ಸಿಗಳಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಸೂಚನೆ ಬಂದರೆ ಪೂನಾವಾಲಾಗೆ ಹೆಚ್ಚಿನ ಭದ್ರತೆ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

2022ರ ಮೇ 18ರಂದು ಅಫ್ತಾಬ್‌ ತನ್ನ ಲಿವ್​ ಇನ್​ ಪಾರ್ಟನರ್​ ಶ್ರದ್ಧಾ ವಾಲ್ಕರ್​ರನ್ನು ಹತ್ಯೆ ಮಾಡಿ ಆಕೆಯನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್​ನಲ್ಲಿಟ್ಟಿದ. ಬಳಿಕ ಆಕೆಯ ಮೃತದೇಹದ ತುಂಡುಗಳನ್ನು ದೆಹಲಿಯ ಮೆಹ್ರೌಲಿಯ ಕಾಡು ಪ್ರದೇಶದಲ್ಲಿ ಎಸೆದಿದ್ದ. ಆ ಬಳಿಕ ಪೊಲೀಸರು ತನಿಖೆ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದರು. ಸದ್ಯ ಆತನನ್ನು ತಿಹಾರ್​ ಜೈಲಿನಲ್ಲಿ ಇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net