ಸರ್ವಿಸಿಂಗ್‌ಗೆ ಬಂದ ಬೈಕ್​​ ಕದ್ದ ಶೋ ರೂಂ ಸೆಕ್ಯುರಿಟಿ ಗಾರ್ಡ್​ ಅರೆಸ್ಟ್​​​​ | Security Guard

Security Guard
Published on: 

Security Guard: ಗ್ರಾಹಕರೊಬ್ಬರ ರಾಯಲ್ ಎನ್‌ಫೀಲ್ಡ್ ಬೈಕ್ ಕದ್ದ ಆರೋಪದ ಮೇಲೆ ಆಟೋಮೊಬೈಲ್ ಸರ್ವಿಸಿಂಗ್ ಶೋ ರೂಂನ ಸೆಕ್ಯುರಿಟಿ ಗಾರ್ಡ್​ನನ್ನು ಮಿಯಾಪುರ ಪೊಲೀಸರು ಶನಿವಾರ (ಜೂ.14) ಬಂಧಿಸಿದ್ದಾರೆ.

ಮದೀನಗುಡದ ಆಟೋಮೊಬೈಲ್ ಶೋ ರೂಂನಲ್ಲಿ ಕೆಲಸ ಮಾಡುತ್ತಿರುವ ಕಿಶೋರ್ ಕುಮಾರ್ (35) ಜೂನ್ 2 ರಂದು ಅವರ ಶೋ ರೂಂಗೆ ಸರ್ವಿಸಿಂಗ್‌ಗೆ ಬಂದ ಬೈಕನ್ನು ಕದ್ದಿದ್ದಾನೆ. ಜೂನ್ 13 ರಂದು ತನಿಖೆ ನಡೆಸಿದಾಗ ಶೋ ರೂಂ ಮೇಲ್ವಿಚಾರಕರಿಗೆ ಬೈಕ್ ಕಳುವಾಗಿರುವುದು ಇತ್ತೀಚೆಗೆ ತಿಳಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರಿನ ಆಧಾರದ ಮೇಲೆ, ಮಿಯಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಿಶೋರ್ ಕುಮಾರ್ ಅವರನ್ನು ಅನುಮಾನದ ಮೇಲೆ ಬಂಧಿಸಿದಾಗ ಅವರು ಅಪರಾಧವನ್ನು ಒಪ್ಪಿಕೊಂಡರು. ಅವರಿಂದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)