

ರಾಂಚಿ: ಅಂಗಡಿ ಮಾಲೀಕನೊಬ್ಬ ಎಲೆಕ್ಟ್ರಿಷಿಯನ್ ಒಬ್ಬನನ್ನು ಸರಪಳಿಯಿಂದ ತಳ್ಳುವ ಗಾಡಿಗೆ ಕಟ್ಟಿ ಹಾಕಿರುವ ಘಟನೆ ಜಾರ್ಖಂಡ್ನ ಧನ್ಬಾದ್ನಲ್ಲಿ ನಡೆದಿದೆ. ಇದನ್ನೂ ಓದಿ: ಕೇರಳದಿಂದ ಕಾಲ್ನಡಿಗೆಯಲ್ಲೇ ಹಜ್ ಯಾತ್ರೆ ಕೈಗೊಂಡ ಯುವಕ; ಈತ ಕ್ರಮಿಸಿದ್ದು 8,600 ಕಿ.ಮೀ ದೂರ!
ಕೆಲಸ ಮಾಡಿಸಿಕೊಡುತ್ತೇನೆಂದು ಹೇಳಿ ಅಂಗಡಿಯಾತನಿಂದ, ಎಲೆಕ್ಟ್ರೀಷಿಯನ್ ಮುಂಗಡ 15 ಸಾವಿರ ರೂ. ಪಡೆದುಕೊಂಡಿದ್ದ. ಆದರೆ ಹಣ ಪಡೆದು ಆರು ತಿಂಗಳು ಕಳೆದರೂ ಹೇಳಿದ ಕೆಲಸ ಮಾತ್ರ ಮಾಡಿಕೊಟ್ಟಿಲ್ಲ. ಕೊನೆಗೆ ಫೋನ್ ಕರೆ ಸ್ವೀಕರಿಸುವುದನ್ನೂ ನಿಲ್ಲಿಸಿದ್ದ. ಇದರಿಂದ ಬೇಸತ್ತ ಅಂಗಡಿಯಾತ, ಎಲೆಕ್ಟ್ರೀಷಿಯನ್ನನ್ನು ಹೇಗೋ ಪತ್ತೆ ಮಾಡಿ ಕೈಗೆ ಸರಪಳಿ ಜಡಿದು ತಳ್ಳುವ ಗಾಡಿಗೆ ಕಟ್ಟಿ ಹಾಕಿದ್ದಾನೆ.
ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಅಂತಿಮವಾಗಿ ಎಲೆಕ್ಟ್ರೀಷಿಯನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. 'ಅಂಗಡಿಯಲ್ಲಿ ಕೆಲಸ ಮಾಡಿಸಿಕೊಡುವುದಾಗಿ ಎಲೆಕ್ಟ್ರೀಷಿಯನ್ ಮುಂಗಡ ಹಣ ಪಡೆದುಕೊಂಡು ಮೋಸ ಮಾಡಿದ್ದಾನೆ. ಆರು ತಿಂಗಳು ಕಳೆದರೂ ಕೆಲಸ ಮಾಡಿಕೊಟ್ಟಿರಲಿಲ್ಲ. ಇದರಿಂದ ಬೇಸತ್ತು ಅಂಗಡಿಯಾತ ಈತನನ್ನು ಸರಪಳಿಯಿಂದ ಕಟ್ಟಿ ಹಾಕಿದ್ದಾನೆ' ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.