ಶೂ ಎಸೆತ ಪ್ರಕರಣ: ಘಟನೆಯಿಂದ ಆಘಾತವಾಗಿದೆ, ಅದು ಮರೆತು ಹೋದ ಅಧ್ಯಾಯ; ಮೊದಲ ಬಾರಿ ಸಿಜೆಐ ಗವಾಯಿ ಪ್ರತಿಕ್ರಿಯೆ| B R Gavai

ವಿಜಯವಾಣಿ (12)
Published on

B R Gavai: ಸುಪ್ರೀಂಕೋರ್ಟ್​ನಲ್ಲಿ ವಕೀಲರೊಬ್ಬರು ತಮ್ಮ ಮೇಲೆ ಶೂ ಎಸೆದ ಘಟನೆ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಆಘಾತಕ್ಕೊಳಗಾಗಿದ್ದೇನೆ, ಅದು ಮರೆತು ಹೋದ ಅಧ್ಯಾಯ ಎಂದು ಗುರುವಾರ(ಅ. 09) ಹೇಳಿದ್ದಾರೆ.

ಲೈವ್ ಲಾ ವರದಿಯ ಪ್ರಕಾರ, ವಕೀಲ ಗೋಪಾಲ್ ಶಂಕರನಾರಾಯಣನ್ ಅವರೊಂದಿಗಿನ ಚರ್ಚೆಯ ಸಂದರ್ಭದಲ್ಲಿ ಬಿ.ಆರ್.ಗವಾಯಿ ಅವರು ಸೋಮವಾರ ನಡೆದ ಘಟನೆಯಿಂದ ನಾನು ಮತ್ತು ನನ್ನ ವಿದ್ವಾಂಸ ಸಹೋದರ ತುಂಬಾ ಆಘಾತಕ್ಕೊಳಗಾಗಿದ್ದೇವೆ, ನಮಗೆ ಇದು ಮರೆತುಹೋದ ಅಧ್ಯಾಯ  ಎಂದಿದ್ದಾರೆ.

ಪೀಠದ ಭಾಗವಾಗಿದ್ದ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರು ದಾಳಿಯ ಬಳಿಕ ಆರೋಪಿ ಬಗ್ಗೆ ಸಿಜೆಐ ಕ್ರಮಕೈಗೊಳ್ಳದ ಬಗ್ಗೆ ತಮ್ಮ ತೀವ್ರ ಅಸಮ್ಮತಿ ವ್ಯಕ್ತಪಡಿಸುತ್ತಾ, ನನಗೆ ಇದರ ಬಗ್ಗೆ ನನ್ನದೇ ಆದ ಅಭಿಪ್ರಾಯಗಳಿವೆ. ಅವರು ಭಾರತದ ಮುಖ್ಯ ನ್ಯಾಯಮೂರ್ತಿ, ಇದು ತಮಾಷೆಯ ವಿಷಯವಲ್ಲ, ಇದು ಸುಪ್ರೀಂಕೋರ್ಟ್​ಗೆ ಮಾಡಿದ ಅವಮಾನ ಎಂದು ಹೇಳಿದರು.

ಈ ವೇಳೆ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ದಾಳಿಯನ್ನು ಖಂಡಿಸಿದರು. ಅದು ಕ್ಷಮಿಸಲಾಗದು. ಸಿಜೆಐ ಅವರ ಗಾಂಭೀರ್ಯ ಮತ್ತು ಔದಾರ್ಯ ಶ್ಲಾಘನೀಯ ಎಂದು ಹೇಳಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net