ಶಾಕಿಂಗ್ : ಯುವಕನ ಮರ್ಮಾಂಗವನ್ನು ಕತ್ತರಿಸಿದ ತೃತೀಯಲಿಂಗಿಗಳು

fir
Published on

ನವದೆಹಲಿ : ಇಬ್ಬರು ತೃತೀಯಲಿಂಗಿಗಳು 24 ವರ್ಷದ ಯುವಕನ ಮರ್ಮಾಂಗವನ್ನು ಕೊಯ್ದು ಹಾಕಿರುವ ಘಟನೆಯೊಂದು ಉತ್ತರ ಪ್ರದೇಶದಿಂದ ವರದಿಯಾಗಿದೆ. ಸಂತ್ರಸ್ತ ಯುವಕನು ಆರೋಪಿಗಳ ಜೊತೆಗೆ ಮದುವೆ ಸಮಾರಂಭಗಳಲ್ಲಿ ನೃತ್ಯ ಮಾಡಲು ಹೋಗುತ್ತಿದ್ದ ಎನ್ನಲಾಗಿದೆ.

ಸಂತ್ರಸ್ತನ ಸೋದರಿ ದೆಹಲಿ ಗೇಟ್ ಪೊಲೀಸರಿಗೆ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಗುಡ್ಡಿ ಮತ್ತು ರಜ್ಜಿ ಎಂಬ ಇಬ್ಬರು ತೃತೀಯಲಿಂಗಿಗಳ ವಿರುದ್ಧ ಐಪಿಸಿ ಸೆಕ್ಷನ್ 326 ರ ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ.

ಸಂತ್ರಸ್ತನು ಆರೋಪಿಗಳೊಂದಿಗೆ ಮದುವೆಯೊಂದರಲ್ಲಿ ನೃತ್ಯ ಮಾಡಲು ಏಪ್ರಿಲ್ 7 ರಂದು ತೆರಳಿದ್ದ. ಮಾರನೇ ದಿನ ಗಾಯಗೊಂಡು ರಸ್ತೆ ಮೇಲೆ ಸಿಕ್ಕ. ವಿಚಾರಿಸಲಾಗಿ ಗುಡ್ಡಿ ಮತ್ತು ರಜ್ಜಿ ತನ್ನ ಮರ್ಮಾಂಗವನ್ನು ಕತ್ತರಿಸಿಹಾಕಿದರು ಎಂದು ಹೇಳಿದ ಎನ್ನಲಾಗಿದೆ.

ಪ್ರಕರಣದ ತನಿಖೆ ಆರಂಭವಾಗಿದ್ದು, ಪೊಲೀಸರು ಹಲವಾರು ಜನರನ್ನು ಈ ಬಗೆಗೆ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸಂತ್ರಸ್ತ ಯುವಕನನ್ನು ವೈದ್ಯಕೀಯ ಶುಶ್ರೂಷೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net