ಚಲಿಸುತ್ತಿದ್ದ ಲಾರಿಯಿಂದ 15 ಕೋಟಿ ರೂ. ಮೌಲ್ಯದ ಐಫೋನ್​ಗಳನ್ನು​ ಕದ್ದ ಖದೀಮರು; ಪೊಲೀಸರು ಹೇಳಿದ್ದಿಷ್ಟು

iphbwe
Published on

ಭೋಪಾಲ್​: ಚೆನ್ನೈನಿಂದ ದೆಹಲಿಗೆ ಸಾಗಿಸುತ್ತಿದ್ದ ಹೈ ಸೆಕ್ಯುರಿಟಿ ಕಾರ್ಗೋ ಟ್ರಕ್‌ನಿಂದ ಕೋಟ್ಯಂತರ ರೂಪಾಯಿ ಮೌಲ್ಯದ 1500 ಕ್ಕೂ ಹೆಚ್ಚು ಐಫೋನ್‌ಗಳನ್ನು ಕಳವು ಮಾಡಿರುವ ಘಟನೆ ಮಧ್ಯಪ್ರದೇಶದ ಸಾಗರ್​ನಲ್ಲಿ ನಡೆದಿದೆ. ಕಳವಾದ ಫೋನ್​ಗಳ ಬೆಲೆ ಸುಮಾರು 15 ಕೋಟಿ ರೂಪಾಯಿ ಎಂದು ಹೇಳಲಾಗಿದ್ದು, ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಾಗರ್ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವಿಕಾಸ್​ ಸೆಹ್ವಾಲ್​, ಚೆನ್ನೈನಿಂದ ಲಾರಿ ದೆಹಲಿ ಕಡೆ ಹೋಗುತ್ತಿತ್ತು ಟ್ರಕ್​ನಲ್ಲಿ ಒಬ್ ಸೆಕ್ಯೂರಿಟಿ ಹಾಗೂ ಕ್ಲೀನರ್​ ಕೂಡ ಇದ್ದರು. ಲಾರಿ ಲಖ್ನಾಡಸ್​ ನರಸಿಂಗಪುರದ ನಡುವೆ ಇರುವಾಗ ಎಲ್ಲರೂ ಒಟ್ಟಿಗೆ ಚಹಾ ಸೇವಿಸಿದ್ದು, ಬಳಿಕ ಚಾಲಕನಿಗೆ ನಿದ್ದೆ ಬರಲು ಆರಂಭಿಸಿದೆ. ಇದನ್ನು ಗಮನಿಸಿದ ಕ್ಲೀನರ್​ ಹಾಗೂ ಸೆಕ್ಯೂರಿಟಿ ಗಾರ್ಡ್​ ಲಾರಿಯನ್ನು ನಿಲ್ಲಿಸಿ ನಿದ್ದೆ ಮಾಡುವಂತೆ ಹೇಳಿದ್ದು, ಅದರಂತೆ ಲಾರಿಯನ್ನು ಚಾಲಕ ಪಾರ್ಕ್​ ಮಾಡಿದ್ದಾನೆ.

ಎಚ್ಚಗೊಂಡಾಗ ಆತನ ಕೈಕಾಲು ಕಟ್ಟಿರುವುದನ್ನು ಗಮನಿಸಿದ ಚಾಲಕ ತಾನು ಲಾರಿ ನಿಲ್ಲಿಸಿದ್ದಕ್ಕಿಂತ ಸುಮಾರು 125 ಕಿಲೋಮೀಟರ್​ ದೂರದ ರಸ್ತೆ ಒಂದರಲ್ಲಿ ಆತನನ್ನು ಬಿಡಲಾಗಿತ್ತು. ರಸ್ತೆ ಬದಿ ಚಾಲಕನನ್ನು ಕಟ್ಟಿಹಾಕಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಆತನ ನೆರವಿಗೆ ಧಾವಿಸಿದ್ದು, ಸ್ಥಳೀಯರ ಸಹಾಯದೊಂದಿಗೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾನೆ. ಈ ವೇಳೆ ಅಧಿಕಾರಿಗಳು ಆತನ ;ಆರೊ ಕಳುವಾದ ವ್ಯಾಪ್ತಿಗೆ ಬರುವ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚಿಸಿದ್ದು, ಅದರಂತೆ ಆತ ಲಖ್ನಾಡಸ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಕರ್ತವ್ಯ ಲೋಪ ಆರೋಪದಡಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಕಳುವಾದ ಲಾರಿ ಜಿಪಿಎಸ್​ ತಂತ್ರಜ್ಞಾನ ಅಳವಡಿಸಲಾಗಿತ್ತು ಎಂದು ವರದಿಯಾಗಿದೆ. ಟ್ರಕ್​ನ ಲಾಕ್​ಗಳು ಸಹ ತಂತ್ರಜ್ಞಾನ ಆಧಾರವಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಅನುಮಾದನ ಮೇರೆಗೆ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸಾಗರ್​ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವಿಕಾಸ್​ ಸೆಹ್ವಾಲ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net