

- ಪ್ರಾಥಮಿಕ ವರದಿ ಪ್ರಕಾರ ಬಿಜೆಪಿ 125 ಸ್ಥಾನಗಳಲ್ಲಿ ಮುನ್ನಡೆ
ಬೆಂಗಳೂರು: ಆಪರೇಷನ್ ಕಮಲ ಅಥವಾ ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಳ್ಳುವ ಪ್ತಮೇಯವೇ ಉದ್ಭವಿಸದು. ಬಿಜೆಪಿಗೆ ಬಹುಮತ ಲಭಿಸಲಿದೆ. ಇದು ಅತಿಯಾದ ಆತ್ಮವಿಶ್ವಾಸವಲ್ಲವೆಂದು ಪಕ್ಷದ ಚುನಾವಣೆ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರು ನೀಡಿರುವ ಪ್ರಾಥಮಿಕ ವರದಿ ಪ್ರಕಾರ 125 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದೇವೆ ಎಂದು ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮತದಾನ ಪೂರ್ವದಂತೆಯೇ ಮತದಾನೋತ್ತರ ಸಮೀಕ್ಷೆಯನ್ನು ಜನರು ಹುಸಿಗೊಳಿಸಲಿದ್ದಾರೆ. ನನಗೆ ವಿಶ್ವಾಸವಿದೆ. ಬಿಜೆಪಿ ಬಹುಮತದ ಸರ್ಕಾರ ರಚಿಸಲಿದ್ದು ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರಲಿದ್ದೇವೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿಗೆ ಬಹುಮತ ನೀಡಿ ಎಂದು ಮಾಡಿದ ಮನವಿಗೆ ಜನರು ಓಗೊಟ್ಟಿದ್ದಾರೆ ಎಂದಿದ್ದಾರೆ.