ಸಮಾಜಕ್ಕಾಗಿಹೋರಾಡಿದ್ದ ಶಿವಶರಣರು

RemasterDirector_22abe5b5f
ಪಿರಿಯಾಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಬಿ.ಎಂ.ಶಿವಸ್ವಾಮಿ ಮಾತನಾಡಿದರು. ಶಕೀಲಾ ಬಾನು, ಎಂ.ಮಾದೇಶ್ ಕುಮಾರ್, ಕೃಷ್ಣಶೆಟ್ಟಿ ಇದ್ದರು.
Published on

ಪಿರಿಯಾಪಟ್ಟಣ: ಅನುಭವ ಮಂಟಪ ಕಟ್ಟುವ ಸಂದರ್ಭ ಮಡಿವಾಳ ಮಾಚಿದೇವರು ಮಹತ್ವದ ಪಾತ್ರ ವಹಿಸಿದ್ದರು ಎಂದು ನಿವೃತ್ತ ಉಪನ್ಯಾಸಕ ಬಿ.ಎಂ.ಶಿವಸ್ವಾಮಿ ಅಭಿಪ್ರಾಯಪಟ್ಟರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಉದ್ಘಾಟಿಸಿ ಮಾತನಾಡಿ, ಕ್ರಿ ಶ.12ನೇ ಶತಮಾನ ವಚನ ಸಾಹಿತ್ಯ ಲೋಕದ ಒಂದು ಮೈಲಿಗಲ್ಲು. ಸಮಾಜದ ಉದ್ಧಾರಕ್ಕಾಗಿ ಶಿವ ಶರಣರನ್ನು ಜಾಗತೀಕರಣಗೊಳಿಸಿದ ಕಾಲಘಟ್ಟವದು ಎಂದರು.

ಶಿರಸ್ತೇದಾರ್ ಶಕೀಲಾ ಬಾನು, ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಎಂ.ಮಾದೇಶ್ ಕುಮಾರ್, ಗೌರವಾಧ್ಯಕ್ಷ ಕೃಷ್ಣಶೆಟ್ಟಿ, ಉಪಾಧ್ಯಕ್ಷರಾದ ರಾಮು, ವಸಂತ, ಸಹ ಕಾರ್ಯದರ್ಶಿ ಸತೀಶ್, ಖಜಾಂಚಿ ರಾಜಶೆಟ್ಟಿ, ಟೌನ್ ಮಡಿವಾಳ ಸಂಘದ ಅಧ್ಯಕ್ಷ ಸತೀಶ್, ಕಾರ್ಯದರ್ಶಿ ಪ್ರದೀಪ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net