PHOTOS: ಶಿವರಾತ್ರಿ ಜಾಗರಣೆ ಆಚರಣೆ ಯಾವ ಊರಲ್ಲಿ ಹೇಗೆ ಏನು?

PTI2_21_2020_000109B
ಜಬಲ್​​ಪುರದಲ್ಲಿ ಮಹಾಶಿವರಾತ್ರಿ
Published on

ಬೆಂಗಳೂರು/ನವದೆಹಲಿ : ನಾಡಿನಾದ್ಯಂತ ಇಂದು ಮಹಾಶಿವರಾತ್ರಿ ಆಚರಿಸಲಾಗುತ್ತಿದ್ದು, ವಿವಿಧೆಡೆ ಶಿವ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದಿವೆ. ಭಕ್ತರು ಸರದಿಯಲ್ಲಿ ಭಗವಂತನ ದರ್ಶನ ಪಡೆಯುತ್ತಿದ್ದಾರೆ.

ಬೆಂಗಳೂರಿನ ಕೆಂಗೇರಿ, ಯಶವಂತಪುರ, ಮಲ್ಲೇಶ್ವರ, ಮನವರ್ತಪೇಟೆ ಶಿವ ದೇಗಲುಗಳಲ್ಲಿ, ಅದೇ ರೀತಿ, ಜಿಲ್ಲೆಗಳಲ್ಲಿ ಪ್ರಖ್ಯಾತ ಶಿವನ ದೇವಸ್ಥಾನಗಳಲ್ಲಿ ಮುಂಜಾನೆಯಿಂದಲೇ ಪೂಜೆಗಳು ಆರಂಭವಾದವು. ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಶಿವರಾತ್ರಿ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಶ್ರೀ ಮಹಾಬಲೇಶ್ವರ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯ ಭಕ್ತರು ಆಗಮಿಸಿ ಆತ್ಮಲಿಂಗಕ್ಕೆ ಪೂಜೆ ಅಭಿಷೇಕ ಸಲ್ಲಿಸುತ್ತಿದ್ದಾರೆ. ಮುರ್ಡೇಶ್ವರ, ಯಾಣ, ಕವಳೇಶ್ವರನ ಸನ್ನಿಧಿಯಲ್ಲೂ ವಿಶೇಷ ಪೂಜೆ ನಡೆಯುತ್ತಿದೆ.

ಇದೇ ರೀತಿ, ಚಾಮರಾಜನಗರ ಜಿಲ್ಲೆಯ ಮಹದೇಶ್ವರನ ಬೆಟ್ಟದಲ್ಲೂ ಮಹಾಶಿವರಾತ್ರಿ ಸಂಭ್ರಮ ಸಡಗರ ನೆಲೆಸಿದೆ. ಬೆಳಗಿನ ಜಾವ 3 ಗಂಟೆಯಿಂದಲೇ ಪೂಜಾ ಕೈಂಕರ್ಯ ಆರಂಭಗೊಂಡವು. ರುದ್ರಾಭಿಷೇಕ, ಕ್ಷೀರಾಭಿಷೇಕ, ಶತಬಿಲ್ವಾರ್ಚನೆ ಮೊದಲಾದ ಪೂಜೆಗಳು ನಡೆದವು. ಬೆಳಗ್ಗೆಯಿಂದಲೇ ಸಾಲುಗಟ್ಟಿದ ಭಕ್ತರು ಮಹದೇಶ್ವರನ ದರ್ಶನ ಪಡೆಯುತ್ತಿದ್ದಾರೆ.

PTI2_21_2020_000038B
ಭುವನೇಶ್ವರದ ಭಗವಾನ್ ಲಿಂಗರಾಜ ದೇವಸ್ಥಾನ
PTI2_21_2020_000046A
ಜಮ್ಮು ವಿನ ಆಪ್ ಶಂಭು ದೇವಸ್ಥಾನದಲ್ಲಿ ಭಕ್ತರು
PTI2_21_2020_000058A
ಥಾಣೆಯ ಕೋಪಿನೇಶ್ವರ ದೇಗುಲ
PTI2_21_2020_000094A
ಮಿರ್ಜಾಪುರ ತಾರಕೇಶ್ವರ ಮಹಾದೇವ ದೇವಸ್ಥಾನ
PTI2_21_2020_000101A
ಮಿರ್ಜಾಪುರದಲ್ಲಿ ನಾಗಾಸಾಧುಗಳ ಆಚರಣೆ
PTI2_21_2020_000107A
ಪ್ರಯಾಗ್​ ರಾಜ್​ನಲ್ಲಿ ಶಿವ ಬಾರಾತ್ ಮೆರವಣಿಗೆಯಲ್ಲಿ ಭಕ್ತರೊಬ್ಬರು ತೋರುತ್ತಿರುವ ಭಕ್ತಿಯ ಆಚರಣೆ
Sudhee_21_Shivaratri_@_Balamuri_Sankashtahara_Ganapathi_Temple_Rajaji_Nagar (1) (1)
ಬೆಂಗಳೂರಿನ ರಾಜಾಜಿನಗರದ ಬಲಮುರಿ ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ
Sudhee_21_Shivaratri_@_Dakshina_Mukha_Nandi_Teertha_Temple (1) (1)
ಬೆಂಗಳೂರಿನ ದಕ್ಷಿಣ ತೀರ್ಥ ನಂದಿ ಮುಖ ದೇವಸ್ಥಾನ
Sudhee_21_Shivaratri_@_Kadu_Malleshwara_Temple (3)
ಬೆಂಗಳೂರಿನ ಕಾಡು ಮಲ್ಲೇಶ್ವರ ದೇವಸ್ಥಾನ
Sudhee_21_Shivaratri_@_Dakshina_Mukha_Nandi_Teertha_Temple (3) (1)
ಬೆಂಗಳೂರಿನ ದಕ್ಷಿಣ ತೀರ್ಥ ನಂದಿ ಮುಖ ದೇವಸ್ಥಾನ
Sudhee_21_Shivaratri_@_Kadu_Malleshwara_Temple (1) (1)
ಬೆಂಗಳೂರಿನ ಕಾಡು ಮಲ್ಲೇಶ್ವರ ದೇವಸ್ಥಾನ
Sudhee_21_Shivaratri_@_Panchasakthi_Temple_Jeevan_Bhima_Nagar
ಬೆಂಗಳೂರಿನ ಜೀವನ್ ಭಿಮಾ ನಗರದ ಪಂಚಮುಖಿ ದೇವಸ್ಥಾನ
Sudhee_21_Shivaratri_@_Male_Mahadeshwara_Temple_Chamarajpet (1)
ಚಾಮರಾಜಪೇಟೆ ಮಲೆಮಹದೇಶ್ವರ ದೇಗುಲದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕ ಜಮೀರ್ ಅಹಮದ್.
Sudhee_21_Shivaratri_@_Maha_Yaga_Kshethra_Sri_Gayatri_Temple_Yeshwanthpur (1)
ಬೆಂಗಳೂರಿನ ಯಶವಂತಪುರದ ಶ್ರೀ ಗಾಯತ್ರಿ ದೇವಸ್ಥಾನದ ಮಹಾ ಯಾಗ ಕ್ಷೇತ್ರ
Sudhee_21_Shivaratri_@_Kemp_Fort_Shiva_Temple (3)
ಬೆಂಗಳೂರಿನ ಕೆಂಪ್ ಫೋರ್ಟ್ ಶಿವ
Sudhee_21_Shivaratri_@_Kadu_Malleshwara_Temple (4)
ಬೆಂಗಳೂರಿನ ಕಾಡುಮಲ್ಲೇಶ್ವರ

ಬೆಂಗಳೂರು/ನವದೆಹಲಿ : ನಾಡಿನಾದ್ಯಂತ ಇಂದು ಮಹಾಶಿವರಾತ್ರಿ ಆಚರಿಸಲಾಗುತ್ತಿದ್ದು, ವಿವಿಧೆಡೆ ಶಿವ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದಿವೆ. ಭಕ್ತರು ಸರದಿಯಲ್ಲಿ ಭಗವಂತನ ದರ್ಶನ ಪಡೆಯುತ್ತಿದ್ದಾರೆ.

ಬೆಂಗಳೂರಿನ ಕೆಂಗೇರಿ, ಯಶವಂತಪುರ, ಮಲ್ಲೇಶ್ವರ, ಮನವರ್ತಪೇಟೆ ಶಿವ ದೇಗಲುಗಳಲ್ಲಿ, ಅದೇ ರೀತಿ, ಜಿಲ್ಲೆಗಳಲ್ಲಿ ಪ್ರಖ್ಯಾತ ಶಿವನ ದೇವಸ್ಥಾನಗಳಲ್ಲಿ ಮುಂಜಾನೆಯಿಂದಲೇ ಪೂಜೆಗಳು ಆರಂಭವಾದವು. ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಶಿವರಾತ್ರಿ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಶ್ರೀ ಮಹಾಬಲೇಶ್ವರ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯ ಭಕ್ತರು ಆಗಮಿಸಿ ಆತ್ಮಲಿಂಗಕ್ಕೆ ಪೂಜೆ ಅಭಿಷೇಕ ಸಲ್ಲಿಸುತ್ತಿದ್ದಾರೆ. ಮುರ್ಡೇಶ್ವರ, ಯಾಣ, ಕವಳೇಶ್ವರನ ಸನ್ನಿಧಿಯಲ್ಲೂ ವಿಶೇಷ ಪೂಜೆ ನಡೆಯುತ್ತಿದೆ.

ಇದೇ ರೀತಿ, ಚಾಮರಾಜನಗರ ಜಿಲ್ಲೆಯ ಮಹದೇಶ್ವರನ ಬೆಟ್ಟದಲ್ಲೂ ಮಹಾಶಿವರಾತ್ರಿ ಸಂಭ್ರಮ ಸಡಗರ ನೆಲೆಸಿದೆ. ಬೆಳಗಿನ ಜಾವ 3 ಗಂಟೆಯಿಂದಲೇ ಪೂಜಾ ಕೈಂಕರ್ಯ ಆರಂಭಗೊಂಡವು. ರುದ್ರಾಭಿಷೇಕ, ಕ್ಷೀರಾಭಿಷೇಕ, ಶತಬಿಲ್ವಾರ್ಚನೆ ಮೊದಲಾದ ಪೂಜೆಗಳು ನಡೆದವು. ಬೆಳಗ್ಗೆಯಿಂದಲೇ ಸಾಲುಗಟ್ಟಿದ ಭಕ್ತರು ಮಹದೇಶ್ವರನ ದರ್ಶನ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net