ಮೇ 19ರಂದು ಶಿವಧೂತ ಗುಳಿಗ ನಾಟಕ ಪ್ರದರ್ಶನ

Ramesh babu
ಅನಿಕೇತನ ಸೇವಾ ಟ್ರಸ್ಟ್ ಅಧ್ಯಕ್ಷ ಎಚ್.ಬಿ.ರಮೇಶ್‌ಬಾಬು
Published on

ಶಿವಮೊಗ್ಗ: ಗಿನ್ನಿಸ್ ದಾಖಲೆಯತ್ತ ದಾಪುಗಾಲಿಡುತ್ತಿರುವ, ವಿಭಿನ್ನ ಶೈಲಿಯ ಶಿವಧೂತ ಗುಳಿಗ ಕನ್ನಡ ನಾಟಕ ಪ್ರದರ್ಶನವನ್ನು ಮೇ 19ರಂದು ಸಂಜೆ 5.30ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಅನಿಕೇತನ ಸೇವಾ ಟ್ರಸ್ಟ್ ಅಧ್ಯಕ್ಷ ಎಚ್.ಬಿ.ರಮೇಶ್‌ಬಾಬು ತಿಳಿಸಿದರು.

ಸಾವಿರ ಪ್ರದರ್ಶನಕ್ಕೆ ಅಣಿಯಾಗಿರುವ ನಾಟಕವು ಇದೀಗ 636ನೇ ಪ್ರದರ್ಶನವಾಗಿದೆ. 30 ಕಲಾವಿದರೊಂದಿಗೆ ಕಾಂತಾರ ಸಿನಿಮಾದ ಗುರುವ ಪಾತ್ರಧಾರಿ ಸ್ವರಾಜ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ ನಾಟಕವನ್ನು ವಿಜಯಕುಮಾರ್ ಕೊಡಿಯಾಲ್‌ಬೈಲ್ ನಿರ್ದೇಶಿಸಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆಯ ಜನತೆಗೆ ವಿನೂತನ ಸಾಂಸ್ಕೃತಿಕ ಕಾರ್ಯಕ್ರಮ ನೀಡಬೇಕೆನ್ನುವ ಉದ್ದೇಶದಿಂದ ಉದಯಿಸಿದ ಅನಿಕೇತನ ಸೇವಾ ಟ್ರಸ್ಟ್ ಮೊದಲು ವಾಯ್ಸ ಆ್ ಕರ್ನಾಟಕ, ವಾಯ್ಸ ಆ್ ಶಿವಮೊಗ್ಗ, ಛತ್ರಪತಿ ಶಿವಾಜಿ ಮಹಾರಾಜ್ ನಾಟಕ, ಸರಿಗಮಪ ವಿಜೇತರಿಗೆ ಸನ್ಮಾನ, ಕತಕ್ ಕಾರ್ಯಕ್ರಮ, ಅಪ್ಪು ಗಾಯನ, ಗೀತನಮನ ಕಾರ್ಯಕ್ರಮ, 2023ರಲ್ಲಿ ಶಾಸೀಯ ಸಂಗೀತ ಆಧಾರಿತ ಚಲನಚಿತ್ರ ಗೀತೆಗಳ ಕಾರ್ಯಕ್ರಮ ಹಮ್ಮಿಕೊಂಡಿತ್ತು ಎಂದರು.
ಖ್ಯಾತ ಕಲಾವಿದರು ಮತ್ತು ವಿಶೇಷ ರಂಗ ಸಜ್ಜಿಕೆ, ಸಂಗೀತ ಈ ನಾಟಕದ ಪ್ರಮುಖ ಅಂಶಗಳಾಗಿದ್ದು, ಭೂತರಾಧನೆಯ ವೈಶಿಷ್ಟೃವನ್ನು ಮತ್ತು ತುಳುನಾಡಿನ ದೈವವಾದ ಗುಳಿಗ ಛ್ಗವದ ಮಹಿಮೆಯನ್ನು ಕೂಡ ಈ ನಾಟಕದಲ್ಲಿ ಕಾಣಬಹುದು. ಬಸವನಗುಡಿ ಒಂದನೇ ತಿರುವಿನ ಅನಿಕೇತನ ವಿದ್ಯಾಲಯದಲ್ಲಿ ಟಿಕೆಟ್‌ಗಳು ಲಭ್ಯವಿದೆ ಎಂದು ಹೇಳಿದರು.
ಕಾರ್ಯನಿರ್ವಾಹಕ ಟ್ರಸ್ಟಿ ವಿಶ್ವೇಶ್ವರಯ್ಯ ಮಾತನಾಡಿ, ದಕ್ಷಿಣ ಭಾರತದಲ್ಲಿ ವಿಶಿಷ್ಟ ಸಂಪ್ರದಾಯ, ಸಂಸ್ಕೃತಿಯನ್ನು ಪರಿಚಯ ಮಾಡಿಕೊಡುವ ಕನಸಿತ್ತು. ಆ ಕನಸು ಶಿವಧೂತ ಗುಳಿಗ ನಾಟಕದ ಮೂಲಕ ನೆರವೇರುತ್ತಿದೆ ಎಂದರು. ಟ್ರಸ್ಟಿ ಸತೀಶ್‌ಕುಮಾರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net