ಆಚಾರ ವಿಚಾರಗಳೇ ವಚನಗಳಿಗೆ ಪ್ರೇರಣೆ : ಬೇಲಿಮಠದ ಶಿವರುದ್ರ ಸ್ವಾಮೀಜಿ ಅಭಿಮತ

16-03-rama-arivina belaku
Published on

ರಾಮನಗರ :  ಜನಸಾಮಾನ್ಯರ ಅರಿವು, ಆಚಾರ-ವಿಚಾರಗಳನ್ನೇ ಆಧಾರವಾಗಿಟ್ಟುಕೊಂಡು ಶರಣರು ವಚನಗಳನ್ನು ರಚಿಸಿದ್ದರು ಎಂದು ಬೇಲಿ ಮಠದ ಶಿವರುದ್ರ ಮಹಾಸ್ವಾಮೀಜಿ ಹೇಳಿದರು.ನಗರದ ಅರಳೆಪೇಟೆಯ ಬಸವೇಶ್ವರ ಪ್ರಾರ್ಥನಾ ಮಂದಿರದಲ್ಲಿ ಮಂಗಳವಾರ ನಡೆದ ಶರಣರ ಅರಿವಿನ ಬೆಳಗು ಮತ್ತು ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.

ಶರಣರು ಯಾವುದೇ ಗ್ರಂಥಗಳನ್ನು ಆಧರಿಸಿ ವಚನಗಳನ್ನು ರಚಿಸಲಿಲ್ಲ. ಜನಸಾಮಾನ್ಯರನ್ನು ಎಚ್ಚರಿಸುವ ದೃಷ್ಟಿಯಿಂದ ಜನರ ಆಚಾರ-ವಿಚಾರ ಮತ್ತು ಅವರ ಜ್ಞಾನಮಟ್ಟವನ್ನು ಆಧರಿಸಿ ವಚನಗಳನ್ನು ರಚಿಸಿದರು ಹಾಗೂ ಆ ವಚನಗಳ ಮೂಲಕ ಜನರನ್ನು ಸನ್ಮಾರ್ಗದ ಕಡೆ ಕರೆದೊಯ್ಯುವ ಕಾಯಕ ಮಾಡಿದರು ಎಂದರು.ವಚನಗಳು ಮಾನವೀಯತೆಯ ಗುಣಗಳನ್ನು ಕಲ್ಪಿಸುತ್ತವೆ. ಶಿಷ್ಟ ಆಧ್ಯಾತ್ಮಿಕತೆ ಚಿಮ್ಮುವಂತೆ ಮಾಡುವ ಶಕ್ತಿಯನ್ನು ಹೊಂದಿವೆ. ನೂರಾರು ವಚನಕಾರರು ಸಾವಿರಾರು ವಚನಗಳನ್ನು ರಚಿಸಿದ್ದರು ಸಹ ಯಾವುದೇ ವಚನಕಾರರಲ್ಲಿ ಭಿನ್ನಾಭಿಪ್ರಾಯ ಇರಲಿಲ್ಲ ಎಂದರು.

ಪ್ರಜೆಗಳಲ್ಲಿ ಸರ್ಕಾರವನ್ನು ಪ್ರಶ್ನಿಸುವ ಮನೋಭಾವವಿಲ್ಲ: ಬಸವಣ್ಣನವರು ರಾಜಪ್ರಭುತ್ವದಲ್ಲಿ ಮಂತ್ರಿಯಾಗಿದ್ದರು ಸಹ ಪ್ರಜೆಗಳನ್ನು ಪ್ರಜಾಪ್ರಭುತ್ವದೆಡೆ ಕರೆದೊಯ್ದಿದ್ದರು, ಪ್ರಭುತ್ವವನ್ನೇ ಪ್ರಶ್ನಿಸುವ ಮಟ್ಟಿಗೆ ಪ್ರಜೆಗಳು ಅಂದು ಬೆಳೆದಿದ್ದರು. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು ವಜ್ರಮಹೋತ್ಸವ ಆಚರಿಸುವ ಸಂದರ್ಭದಲ್ಲಿಯೂ ಪ್ರಜೆಗಳಿಂದ ಆಯ್ಕೆಯಾದ ಸರ್ಕಾರವನ್ನು ಪ್ರಶ್ನಿಸುವ ಮನೋಭಾವ ಪ್ರಜೆಗಳಲಿಲ್ಲ. ಚುನಾವಣಾ ಸಂದರ್ಭದಲ್ಲಿ ಹಣಕ್ಕೆ ಕೈಯೊಡ್ಡಿ ತಮ್ಮತನ ಕಳೆದುಕೊಳ್ಳುತ್ತಿದ್ದಾರೆ ಎಂದು ಶಿವರುದ್ರ ಮಹಾಸ್ವಾಮೀಜಿ ಹೇಳಿದರು.

ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ವಿಶ್ವಗುರು ಬಸವಣ್ಣ ಸಾರಿದ ಕಾಯಕವೇ ಕೈಲಾಸ ತತ್ವ ಸರ್ವಕಾಲಕ್ಕೂ ಪ್ರಸ್ತುತವಾಗಿದೆ. ಬಸವಣ್ಣನವರ ತತ್ವವನ್ನು ವಿಶ್ವ ಒಪ್ಪಿದ್ದರಿಂದಲೇ ಇಂದು ಬ್ರಿಟನ್‌ನಂತಹ ಪಾಶ್ವಾತ್ಯ ದೇಶದಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪಿಸಲಾಗಿದೆ ಎಂದರು.

ಪ್ರತಿಯೊಬ್ಬ ನಾಗರಿಕರು ಕಾಯಕ ಮತ್ತು ದಾಸೋಹ ಮಾಡಬೇಕು. ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಶ್ರೀಗಳು ದಶಕಗಳಿಂದ ದಾಸೋಹ ಮಾಡುತ್ತಾ ಬಂದಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಈ ಮಠದಲ್ಲಿ ಉಳಿದು ಅನ್ನ-ಅಕ್ಷರ ದಾಸೋಹದ ಮೂಲಕ ಜೀವನ ಕಟ್ಟಿಕೊಂಡಿದ್ದಾರೆ ಎಂದರು.

ಮೈಸೂರು ಕುಂದೂರು ಮಠದ ಶ್ರೀ ಶರತಚಂದ್ರ ಮಹಾಸ್ವಾಮೀಜಿ, ಬೆಂಗಳೂರು ಎಸ್‌ಜೆಆರ್ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರೇಮಾ ಸಿದ್ದರಾಜು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಹಲವಾರು ಸಮಾಜ ಸೇವಕರನ್ನು ಸನ್ಮಾನಿಸಲಾುತು. ಮಾಯಗಾನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷೆ ಸರಸ್ವತಮ್ಮ ಧರ್ಮ ಧ್ವಜಾರೋಹಣ ನೆರವೇರಿಸಿದರು. ಶಿವಮಠ ಮರಳವಾಡಿ ಕಿರಿಯಶ್ರೀ ಕಿರೀಟ ಸ್ವಾಮೀಜಿ, ಗ್ರಂಥ ಲೇಖಕ ಶಂಕರಗೌಡ ಮ. ಬಿರಾದಾರ, ಜಗನ್ನಾಥಪ್ಪನ ಶಾಲೆ ಸೇರಿದಂತೆ ಅನೇಕ ಗಣ್ಯರು ಮಾತನಾಡಿದರು.

ಕನಕಪುರ ದೇಗುಲ ಮಠಾಧ್ಯಕ್ಷ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿ, ಶಿವಮಠ ದೊಡ್ಡಮರಳವಾಡಿಯ ಕಿರಿಯಶ್ರೀ ಮೃತ್ಯುಂಜಯ ಸ್ವಾಮೀಜಿ, ಚನ್ನಪಟ್ಟಣ ವಿರಕ್ತ ಮಠದ ಶ್ರೀ ಶಿವರುದ್ರಸ್ವಾಮೀಜಿ, ಬೇವೂರು ಮಠದ ಮೃತ್ಯುಂಜಯ ಸ್ವಾಮೀಜಿ, ಚಿಕ್ಕಕಲ್ಲುಬಾಳು ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ರೇವಣಸಿದ್ದೇಶ್ವರ ಬೆಟ್ಟದ ಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು. ರಾಮನಗರ ಪ್ರಾಧಿಕಾರ ಅಧ್ಯಕ್ಷ ಎಚ್.ಎಸ್. ಮುರಳೀಧರ್, ಕನಕಪುರ ಯೋಜನಾಪ್ರಾಧಿಕಾರ ಅಧ್ಯಕ್ಷ ಜಗನ್ನಾಥ್, ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್, ಅಖಿಲಭಾರತ ೀರಶೈವ ಮಹಾಸಭಾ ರಾಮನಗರ ತಾಲೂಕು ಅಧ್ಯಕ್ಷ ಎಂ.ಎಸ್. ಶಂಕರಪ್ಪ, ರಾಮನಗರ ತಾಲೂಕು ೀರಶೈವ ಸಂಘದ ಅಧ್ಯಕ್ಷ ಎಂ.ಆರ್. ಶಿವಕುಮಾರಸ್ವಾು, ಪ್ರಾಧಿಕಾರ ಮಾಜಿ ಅಧ್ಯಕ್ಷ ಎಸ್.ಆರ್. ನಾಗರಾಜು, ತಾಪಂ ಮಾಜಿಸದಸ್ಯ ಕೇತೋಹಳ್ಳಿ ಶಂಕರಪ್ಪ, ಮಾಜಿ ನಗರಸಭಾ ಸದಸ್ಯ ಎ.ಜೆ. ಸುರೇಶ್ ಮುಕಂಡರಾದ ಗುರುಲಿಂಗಯ್ಯ, ಶಿವಶಂಕರ್, ಶಿವಲಿಂಗಪ್ರಸಾದ್, ಶಿವಕುಮಾರ್‌ಸ್ವಾು, ದೊಡ್ಡೀರಯ್ಯ, ರೇಣುಕಪ್ಪ ಮುಂತಾದವರಿದ್ದರು.

ಬಸವಣ್ಣನವರ ವಚನ ಸಾಹಿತ್ಯ ಸಮ ಸಮಾಜ ನಿರ್ಮಾಣಕ್ಕೆ ಅಪಾರ ಒತ್ತು ಕೊಟ್ಟು ರಚಿಸಿದಂತಹವು. ಎಂಟು ನೂರು ವರ್ಷಗಳ ಹಿಂದೆಯೆ ಮಹಿಳೆಯರು ಮತ್ತು ಶೋಷಿತರಿಗೆ ಸಮಾನತೆ ಕಲ್ಪಿಸಿ ಸಮ ಸಮಾಜದ ಕಲ್ಪನೆಯನ್ನು ಸಾಕಾರಗೊಳಿಸಿದ್ದರು. ಆದರೆ ಇಂದು ಸಮಾಜ ಬಸವಣ್ಣನವರ ಆದರ್ಶ ಮರೆತು ಸಮಾಜ ದಿಕ್ಕು ತಪ್ಪುತ್ತಿದೆ. ಕೆ. ರಾಜು ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net