

ರಿಪ್ಪನ್ಪೇಟೆ: ಪಟ್ಟಣದ ವಿವಿಧ ಹಾಸ್ಟೆಲ್ಗಳಿಗೆ ಜಿಪಂ ಸಿಇಒ ಎನ್.ಹೇಮಂತ್ ಭೇಟಿ ನೀಡಿ ಪರಿಶೀಲಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸಾಗರ ರಸ್ತೆ ಹಾಗೂ ಬರುವೆ ಗ್ರಾಮದ ಮೆಟ್ರಿಕ್ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಸ್ವಚ್ಛತೆ, ಮೂಲ ಸೌಕರ್ಯಗಳ ನಿರ್ವಹಣೆ ಪರಿಶೀಲಿಸಿದರು. ವಿದ್ಯಾರ್ಥಿಗಳ ಬಟ್ಟೆ ಒಣಗಿಸಲು ಇನ್ನಷ್ಟು ವ್ಯವಸ್ಥೆ ಕಲ್ಪಿಸಬೇಕು. ವಸತಿ ನಿಲಯದ ನೀರು ಬೇರೆಡೆ ಹರಿದುಹೋಗದಂತೆ ಇಂಗು ಗುಂಡಿ ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕುಡಿಯುವ ನೀರಿನ ಜೆಜೆಎಂ ಕಾಮಗಾರಿ ಪರಿಶೀಲಿಸಿ ನ್ಯೂನ್ಯತೆ ಇರುವೆಡೆ ಸರಿಪಡಿಸಿಕೊಂಡು ಪೂರ್ಣ ಕಾಮಗಾರಿ ನಡೆಸಬೇಕು. ನಂತರ ಮತ್ತೊಮ್ಮೆ ಸ್ಥಳ ಪರಿಶೀಲಿಸಿ ಪಂಚಾಯಿತಿ ನಿರ್ವಹಣೆಗೆ ಹಸ್ತಾಂತರ ಮಾಡಿಕೊಳ್ಳಬೇಕು ಎಂದು ಪಿಡಿಒಗೆ ಸೂಚಿಸಿದರು. ತಾಪಂ ಇಒ ನರೇಂದ್ರ ಕುಮಾರ್, ಬಿಇಒ ಕೃಷ್ಣಮೂರ್ತಿ, ಸಮಾಜ ಕಲ್ಯಾಣ ವಿಸ್ತರಣಾಧಿಕಾರಿ ಗೀತಾ, ಸಿಡಿಪಿಒ ಗಾಯಿತ್ರಿ, ಇಂಜಿನಿಯರ್ ಓಂಕಾರ, ಪಿಡಿಒ ನಾಗರಾಜ್ ಇತರರಿದ್ದರು.