

ಸೊರಬ: ಧ್ಯಾನ, ಯೋಗ ಮತ್ತು ದಾನದ ಮೂಲಕ ನೆಮ್ಮದಿ ಜೀವನ ನಡೆಸಬಹುದು ಎಂದು ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿನ ಮುರುಘಾಮಠದ ಆವರಣದಲ್ಲಿ ನೂಲುಹುಣ್ಣಿಮೆ ಹಾಗೂ ರಕ್ಷಾ ಬಂಧನ ಕಾರ್ಯಕ್ರಮ ಅಂಗವಾಗಿ ಏರ್ಪಡಿಸಿದ್ದ 236ನೇ ಶಿವಾನುಭವ ಗೋಷ್ಠಿ ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದ ಅವರು, ಮಠಗಳು ಧಾರ್ಮಿಕವಾಗಿ ಗಟ್ಟಿಗೊಳ್ಳಲು ಸಮಾಜ ಸದೃಢವಾಗಿರಬೇಕು. ದಾನ, ಧರ್ಮ, ಪರೋಪಕಾರ ನಮ್ಮನ್ನು ಸದಾ ಕಾಪಾಡುತ್ತದೆ ಎಂದು ತಿಳಿಸಿದರು.
ಅಕ್ಕನ ಬಳಗದಿಂದ ಭಜನಾ ಕಾರ್ಯಕ್ರಮ ನಡೆಯಿತು. ತ್ಯಾವಗೋಡು ಗ್ರಾಮದ ನಂದಿನಿ, ದಯಾನಂದ್ ಗೌಡ, ಮಲ್ಲಿಕಾರ್ಜುನ ಗೌಡ, ಎಂ.ಆರ್.ಪಾಟೀಲ್, ಚೇತನಕ್ಕ, ಶಂಕರ್ ಶೇಟ್, ಗೀತಾ ಮಲ್ಲಿಕಾರ್ಜುನ, ಡಿ.ಶಿವಯೋಗಿ, ವಿಜಯೇಂದ್ರ ಗೌಡ, ಮಲ್ಲಿಕಾರ್ಜುನ ದ್ವಾರಳ್ಳಿ ಇತರರಿದ್ದರು.