ಧಾರ್ಮಿಕ ಕಾರ್ಯಗಳಿಂದ ಲೋಕಕಲ್ಯಾಣ

7skp brammakumari
ಶಿಕಾರಿಪುರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಶುಭಸಂಕಲ್ಪಗಳ ದೀಪೋತ್ಸವವನ್ನು ವೀರಶೈವ ಮಹಾಸಭಾ ರಾಜ್ಯ ನಿರ್ದೇಶಕ ಎನ್.ವಿ.ಈರೇಶ್ ಉದ್ಘಾಟಿಸಿದರು. ಶೈಲಾ ಮಡ್ಡಿ, ಪದ್ಮಕ್ಕ, ಸ್ನೇಹಕ್ಕ, ಸುಧೀರ್, ರುದ್ರಮುನಿ, ಕಾಂಚನಾ ಕುಮಾರ್, ರಾಜಶೇಖರ ಇತರರಿದ್ದರು.
Published on

ಶಿಕಾರಿಪುರ: ಧಾರ್ಮಿಕ ಕಾರ್ಯ ಲೋಕಕಲ್ಯಾಣದ ಕೆಲಸ ಆಗಿದೆ. ಹೀಗಾಗಿ ಎಲ್ಲರೂ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹಳಿಯಾಳ ಈಶ್ವರೀಯ ವಿಶ್ವವಿದ್ಯಾಲಯದ ಪದ್ಮಕ್ಕ ಹೇಳಿದರು.

ಪಟ್ಟಣದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಶುಭ ಸಂಕಲ್ಪಗಳ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ನಾಡಿನ ಮಣ್ಣು ಅತ್ಯಂತ ಶ್ರೇಷ್ಠ, ಪವಿತ್ರವಾದುದು. ಇಲ್ಲಿ ಭಗವಂತನ ಸಾನ್ನಿಧ್ಯವಿದೆ. ಭಗವಂತನ ಇರುವಿಕೆ ಎಲ್ಲೆಡೆ ಇದೆ ಎಂದು ತಿಳಿಸಿದರು.

ರಾಜ್ಯ ವೀರಶೈವ ಮಹಾಸಭಾ ನಿರ್ದೇಶಕ ಎನ್.ವಿ.ಈರೇಶ್ ಮಾತನಾಡಿ, ಶಿಕಾರಿಪುರದ ಈಶ್ವರೀಯ ವಿಶ್ವವಿದ್ಯಾಲಯ ಅಧ್ಯಾತ್ಮದ ಬುತ್ತಿ ಹಂಚುತ್ತಿದೆ. ಈಶ್ವರೀಯ ವಿಶ್ವವಿದ್ಯಾಲಯ ಎಂದರೆ ಭಗವಂತನ ಸಾನ್ನಿಧ್ಯವಿರುವ ತಾಣ ಎಂದರು.

ಪುರಸಭೆ ಅಧ್ಯಕ್ಷೆ ಶೈಲಾ ಮಡ್ಡಿ ಮಾತನಾಡಿ, ಭಾರತ ಜಗತ್ತಿನಲ್ಲಿ ಆಧ್ಯಾತ್ಮಿಕ ಶಕ್ತಿ ಬಲದಿಂದ ಪ್ರಕಾಶಿಸುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳು ಜನರಲ್ಲಿ ನಿರಂತರ ಧರ್ಮಜಾಗೃತಿ ಮೂಡಿಸುತ್ತಿವೆ ಎಂದು ತಿಳಿಸಿದರು.

ಶಿಕಾರಿಪುರ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಸ್ನೇಹಕ್ಕ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಸುಧೀರ್, ಮಹಿಳಾ ಘಟಕದ ಕಾಂಚನಾ ಕುಮಾರ್, ಪ್ರಶಾಂತ್, ರುದ್ರಮುನಿ, ರಾಜಶೇಖರ ಗಿರ್ಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net