ಹೆನ್ನಿ ರಸ್ತೆ ದುರಸ್ತಿಯಿಂದ ಗ್ರಾಮಸ್ಥರಿಗೆ ನೆಮ್ಮದಿ

04kgl02
ಜೋಗ-ಕಾರ್ಗಲ್ ಪಪಂನಿಂದ ಹೆನ್ನಿ ಭಾಗದಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆಸುತ್ತಿರುವುದು.
Published on

ಕಾರ್ಗಲ್: ಜೋಗ-ಕಾರ್ಗಲ್ ಪಪಂ ವ್ಯಾಪ್ತಿಯ ಹೆನ್ನಿ ರಸ್ತೆಯು ಹಾಳಾಗಿ ಬಸ್ ಸಂಪರ್ಕ ನಿಲ್ಲಿಸಲಾಗಿತ್ತು. ಇದೀಗ ರಸ್ತೆ ದುರಸ್ತಿ ಆಗಿರುವುದರಿಂದ ಮತ್ತೆ ಬಸ್ ಸಂಚಾರ ಆರಂಭವಾಗಿದೆ.

ಪ್ರತಿ ವರ್ಷ ಮಳೆಗಾಲದ ಸಂದರ್ಭ ಹೆನ್ನಿ ಭಾಗದ ಮರಾಠಿಕೇರಿ ರಸ್ತೆಯು ಹಾಳಾಗಿ ವಾಹನಗಳು ಸಂಚರಿಸಲು ಕಷ್ಟವಾಗುತ್ತದೆ. ಈ ಬಾರಿಯೂ ಇದೇ ಪರಿಸ್ಥಿತಿಯಿಂದ ಬಸ್ ತಲುಪಲು ಸಮಸ್ಯೆಯಾಗಿ ವಡನಬೈಲು ಬಳೆ ಪದ್ಮಾವತಿ ದೇವಾಲಯದವರೆಗೂ ತೆರಳುತ್ತಿತ್ತು. ಹೀಗಾಗಿ ಹೆನ್ನಿ, ಜಾಡಗಲ್ಲು, ಹಿರೆಹೆನ್ನಿ, ಮರಾಠಿಕೇರಿ, ಗುಂಡಿಬೈಲು, ಹೊನ್ಮನೆ, ಮೂಡಳ್ಳಿ, ಸುಂಕದಮನೆ ಸೇರಿ ಹಲವು ಗ್ರಾಮಗಳ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಬಸ್‌ಗಾಗಿ ದೇವಾಲಯದವರೆಗೂ ನಡೆಯಬೇಕಾಗಿತ್ತು. ಬಸ್ ಸಂಚಾರ ನಿಲ್ಲಿಸಿದ್ದರಿಂದ ಗ್ರಾಮಸ್ಥರು ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರಸ್ತೆ ಸರಿಪಡಿಸುವಂತೆ ಸ್ಥಳೀಯ ಪಪಂಗೆ ಮನವಿ ಮಾಡಿದ್ದರು.

ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ ಮೇರೆಗೆ ತುರ್ತಾಗಿ ರಸ್ತೆ ದುರಸ್ತಿ ಕಾರ್ಯ ನಡೆದಿದ್ದು, ಜೆಸಿಬಿ ಯಂತ್ರ, ಟಿಪ್ಪರ್ ಹಾಗೂ ರೋಲರ್ ಬಳಸಿ 3 ದಿನ ಎರಡು ಕಿ.ಮೀ. ಉದ್ದಕ್ಕೂ ರಸ್ತೆಗೆ ಜಲ್ಲಿಕಲ್ಲು ಹಾಕಿ ಮೆಟ್ಲಿಂಗ್ ಮಾಡಲಾಗಿದೆ. 80 ಮಕ್ಕಳು ನಿತ್ಯ ಜೋಗ ಮತ್ತು ಕಾರ್ಗಲ್‌ಗೆ ಶಾಲೆಗಾಗಿ ಬಸ್‌ನಲ್ಲಿ ಓಡಾಡುತ್ತಾರೆ ಎಂದು ಮುಖ್ಯಾಧಿಕಾರಿ ಎಂ.ಕೆ.ಸುರೇಶ್ ತಿಳಿಸಿದರು. ಪಪಂ ಅಧ್ಯಕ್ಷ ಎಂ.ರಾಜು ರಸ್ತೆ ದುರಸ್ತಿ ಪರಿಶೀಲಿಸಿದರು. ಗ್ರಾಮಸ್ಥರು ಕೂಡ ಶ್ರಮದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net