ನೀರು, ಬಸ್ ಸಂಪರ್ಕಕ್ಕೆ ಪ್ರತಿಭಟನೆ

vijaya
Published on

ಶಿವಮೊಗ್ಗ: ಕುಡಿಯುವ ನೀರು ಮತ್ತು ಸಾರಿಗೆ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿ ತಾಲೂಕಿನ ಕಲ್ಲಗಂಗೂರು ಗ್ರಾಮದ ಜಿಲ್ಲಾ ಶ್ರೀ ಸಿದ್ಧರಾಮೇಶ್ವರ ಮಹಿಳಾ ಭೋವಿ ಸಂಘದ ಪದಾಧಿಕಾರಿಗಳು ಜಿಪಂ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ನಿತ್ಯವೂ ಆಸ್ಪತ್ರೆಗೆ ಅಲೆದಾಡುವಂತೆ ಆಗಿದೆ. ಹಾಗಾಗಿ ಶುದ್ಧ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು.

ಕಲ್ಲಗಂಗೂರು ಗ್ರಾಮ ಶಿವಮೊಗ್ಗಕ್ಕೆ ಹೊಂದಿಕೊಂಡಿದ್ದರೂ ಸಾರಿಗೆ ಸಂಪರ್ಕವಿಲ್ಲ. ಶಾಲಾ ಮಕ್ಕಳು, ಮಹಿಳೆಯರು, ವೃದ್ಧರು ಶಿವಮೊಗ್ಗಕ್ಕೆ ಬರಲು ಸಮಸ್ಯೆ ಆಗುತ್ತಿದೆ. ತಕ್ಷಣವೇ ಈ ಎರಡೂ ಸಮಸ್ಯೆಗಳನ್ನು ಪರಿಹರಿಸುವಂತೆ ಜಿಪಂ ಸಿಇಒ ಎನ್.ಡಿ.ಪ್ರಕಾಶ್ ಅವರಿಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷೆ ಕೆ.ಬಿ.ವಿಜಯಲಕ್ಷ್ಮೀ, ಪದಾಧಿಕಾರಿಗಳಾದ ಕೆ.ಎನ್.ರೂಪಾ, ಶಾಂತಾ ಗುಣಶೇಖರ್, ಅನಿಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net