ಶಿಕ್ಷಕರ ಮೇಲಿದೆ ಮಹತ್ತರ ಜವಾಬ್ದಾರಿ

11 HHR 06
ಹೊಳೆಹೊನ್ನೂರಿನ ವಿವೇಕಾನಂದ ಶಾಲೆಯಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕ ಬಸವರಾಜಪ್ಪ ಅವರನ್ನು ಸನ್ಮಾನಿಸಲಾಯಿತು. ಸೀತಾರಾಮ್, ದ್ಯಾಮಪ್ಪ, ರೇಣುಕಾ ಇತರರಿದ್ದರು.
Published on

ಹೊಳೆಹೊನ್ನೂರು: ಉತ್ತಮ ಪ್ರಜೆಗಳನ್ನು ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಮೂಡಲವಿಠಲಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ನಿವೃತ್ತ ಶಿಕ್ಷಕ ಬಸವರಾಜಪ್ಪ ಹೇಳಿದರು.

ವಿವೇಕಾನಂದ ಲಯನ್ಸ್ ವಿದ್ಯಾವರ್ಧಕ ಟ್ರಸ್ಟ್‌ನಿಂದ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಮಕ್ಕಳಿಗೆ ಶಿಕ್ಷಕರು ಪ್ರಾಮಾಣಿಕ ಸೇವೆ ಮಾಡಬೇಕು. ಆದರ್ಶ ಗುಣಗಳನ್ನು ಶಿಕ್ಷಕರು ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಟ್ರಸ್ಟ್ ಅಧ್ಯಕ್ಷ ಜಿ.ಆರ್.ಸೀತಾರಾಮ್, ಕಾರ್ಯದರ್ಶಿ ದ್ಯಾಮಪ್ಪ, ಇ.ರೇಣುಕಾ, ಎಚ್.ಸಿ.ರಾಜೇಶ್, ಪಿ.ರುದ್ರೇಶನ್, ರಮೇಶ್, ಪದ್ಮನಾಭ್ ಹೊಸಳ್ಳಿ, ಎಚ್.ಸುರೇಶ್, ಎಸ್.ಕಲ್ಯಾಣಪ್ಪ, ರಾಬಿಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net