ಬ್ಯಾಂಕ್ ಪ್ರಗತಿ ಸಾಧಿಸಲು ಸಿಬ್ಬಂದಿ ಶ್ರಮ ಅವಶ್ಯ

10sor1
ಸೊರಬ ಕೆನರಾ ಬ್ಯಾಂಕ್ ಶಾಖೆಯಿಂದ ವರ್ಗಾವಣೆಗೊಂಡ ವ್ಯವಸ್ಥಾಪಕ ಮಂಜುನಾಥ, ಅಧಿಕಾರಿ ಆನಂದ ಅವರಿಗೆ ಬೀಳ್ಕೊಡಲಾಯಿತು. ಶಂಕರ್ ಶೇಟ್, ಅಣ್ಣಾಜಿ ಗೌಡ, ಸಜೀವ್ ಇತರರಿದ್ದರು.
Published on

ಸೊರಬ: ಹಾವೇರಿ ವಿಭಾಗ ಮಟ್ಟದಲ್ಲಿ ಸೊರಬ ಕೆನರಾ ಬ್ಯಾಂಕ್ ಶಾಖೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್ ಹೇಳಿದರು.

ಕೆನರಾ ಬ್ಯಾಂಕ್ ಶಾಖೆಯಿಂದ ವರ್ಗಾವಣೆಗೊಂಡ ವ್ಯವಸ್ಥಾಪಕ ಮಂಜುನಾಥ ಹಾಗೂ ಅಧಿಕಾರಿ ಆನಂದ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, 2024ರಿಂದ ಸತತ ಪ್ರಗತಿಯಲ್ಲಿ ಇರುವ ಬ್ಯಾಂಕ್ ಇನ್ನು ಹೆಚ್ಚಿನ ಪ್ರಗತಿ ಸಾಧಿಸಲು ನೌಕರರು ಶ್ರಮಿಸಬೇಕು ಎಂದು ತಿಳಿಸಿದರು.

ವ್ಯವಸ್ಥಾಪಕ ಮಂಜುನಾಥ ಮಾತನಾಡಿ, 2024ರಲ್ಲಿ ಠೇವಣಿ ಸಂಗ್ರಹ 174.66 ಕೋಟಿ ರೂ. ಹಾಗೂ ಮುಂಗಡ ಸಾಲವಾಗಿ 128.42 ಕೋಟಿ ರೂ. ನೀಡಿದ್ದು, ಒಟ್ಟು 304.7 ಕೋಟಿ ರೂ. ವಹಿವಾಟು ನಡೆಸಲಾಗಿದೆ ಎಂದರು.

ಅಧಿಕಾರಿ ಆನಂದ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಣ್ಣಾಜಿ ಗೌಡ, ಬ್ಯಾಂಕ್ ಪ್ರಭಾರ ವ್ಯವಸ್ಥಾಪಕ ಸಜೀವ್, ಸುಹಾಸ್, ಬ್ಯಾಂಕ್ ಸಿಬ್ಬಂದಿ ಪೂಜಾ, ನಂದಾ, ಸಚಿನ್, ಉಲ್ಲಾಸ್, ಜಯಮ್ಮ, ವಕೀಲ ನಾಗಪ್ಪ, ಲಕ್ಷ್ಮೀಕಾಂತ, ಶ್ರೀಕರ, ವೀರೇಶ್ ಉಪ್ಪಿನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net