ದಸರಾ ಹಬ್ಬಕ್ಕೆ ವಿಶೇಷ ಕೊಡುಗೆ

22sor 1
ಜಿಎಸ್‌ಟಿ ವಿನಾಯಿತಿ ಹಿನ್ನೆಲೆಯಲ್ಲಿ ಸೊರಬದಲ್ಲಿ ಮಹಿಳಾ ಮೋರ್ಚಾದಿಂದ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ಬಿಜೆಪಿ ಮುಖಂಡ ಡಾ. ಜ್ಞಾನೇಶ್ ಮಾತನಾಡಿದರು. ಹೊಳಿಯಮ್ಮ, ರಾಜು ತಲ್ಲೂರು, ಪ್ರಕಾಶ್ ಆಗಸನಹಳ್ಳಿ ಇತರರಿದ್ದರು.
Published on

ಸೊರಬ: ಜಿಎಸ್‌ಟಿ ಕಡಿತಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕರಿಗೆ ದಸರಾ ಹಬ್ಬಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ಬಿಜೆಪಿ ಮುಖಂಡ ಡಾ. ಜ್ಞಾನೇಶ್ ಹೇಳಿದರು.

ಜಿಎಸ್‌ಟಿ ಕಡಿತಗೊಳಿಸಿದ ಕೇಂದ್ರ ಸರ್ಕಾರದ ನಿಲುವು ಸ್ವಾಗತಿಸಿ ಪಟ್ಟಣದ ಆಂಜನೇಯ ಸ್ವಾಮಿ ವೃತ್ತದ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ದಿನಬಳಕೆ ವಸ್ತುಗಳ ಬೆಲೆ ಗಣನೀಯ ಇಳಿಕೆಯಾಗಲಿದೆ. ಇದರಿಂದ ಕೆಳವರ್ಗದ ಜನರ ಜೀವನ ಕ್ರಮ ಸುಧಾರಿಸುವ ಜತೆಗೆ ವರ್ತಕರಿಗೂ ಅನುಕೂಲ ಆಗಲಿದೆ ಎಂದು ತಿಳಿಸಿದರು.

ಜಾಗತಿಕ ಮಟ್ಟದಲ್ಲಿ ದೇಶವನ್ನು ಆರ್ಥಿಕತೆಯಲ್ಲಿ ಉನ್ನತಿಗೆ ಕೊಂಡೊಯ್ದ ನರೇಂದ್ರ ಮೋದಿ ವಿಶ್ವ ನಾಯಕರಾಗಿದ್ದಾರೆ. ದಿನಬಳಕೆ ವಸ್ತುಗಳಿಗೆ ಶೇ. 18ರಷ್ಟು ಹಾಗೂ ಕಾರು ಮತ್ತಿತರ ವಾಹನಗಳಿಗೆ ಶೇ. 28ರಷ್ಟು ವಿಧಿಸುತ್ತಿದ್ದ ಸರಕು ಮತ್ತು ಸೇವಾ ತೆರಿಗೆಯನ್ನು ಕಡಿಮೆಗೊಳಿಸಲಾಗಿದೆ ಎಂದರು.

ಮಡಿವಾಳ ಮಾಚೀದೇವ ನಿಗಮದ ಮಾಜಿ ಅಧ್ಯಕ್ಷ ರಾಜು ತಲ್ಲೂರು, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ, ಯುವ ಮೋರ್ಚಾ ಅಧ್ಯಕ್ಷ ರಾಜು, ಮಹಿಳಾ ಅಧ್ಯಕ್ಷೆ ಹೊಳಿಯಮ್ಮ, ಜಾನಕಪ್ಪ ಯಲಸಿ, ಸುಧಾ, ಗೌರಮ್ಮ ಭಂಡಾರಿ, ಭಾಗ್ಯಶ್ರೀ, ದೇವೇಂದ್ರಪ್ಪ, ಡಿ.ಶಿವಯೋಗಿ, ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net