ಸಾಮಾಜಿಕ ಭದ್ರತೆ ಯೋಜನೆಯಡಿ ನೋಂದಾಯಿಸಿ

24Thyagarthi 3 file 2
ಹಿರೇಬಿಲಗುಂಜಿ ಗ್ರಾಪಂ ಆವರಣದಲ್ಲಿ ಏರ್ಪಡಿಸಿದ್ದ ಜನಸುರಕ್ಷಾ ಅಭಿಯಾನದಲ್ಲಿ ನೋಡಲ್ ಅಧಿಕಾರಿ ಸುಜಯ್ ಮಾತನಾಡಿದರು. ಶೇಖರಪ್ಪ, ಕವಿತಾ, ವಿಶಾಲಾಕ್ಷಿ ಇದ್ದರು.
Published on

ತ್ಯಾಗರ್ತಿ: ಜನಸುರಕ್ಷಾ ಮತ್ತು ರೈತರ ಕಲ್ಯಾಣ ಯೋಜನೆಯಡಿ ಜನಸಾಮಾನ್ಯರ ಸಾಮಾಜಿಕ ಭದ್ರತೆ ದೃಷ್ಟಿಯಿಂದ ಬೃಹತ್ ಪ್ರಚಾರ ಆಂದೋಲನ ನಡೆಸುತ್ತಿದ್ದು, 18 ವರ್ಷ ತುಂಬಿದ ಕುಟುಂಬದ ಪ್ರತಿ ಸದಸ್ಯರು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ನೋಡಲ್ ಅಧಿಕಾರಿ ಸುಜಯ್ ಹೇಳಿದರು.

ಹಿರೇಬಿಲಗುಂಜಿ ಗ್ರಾಪಂ ಆವರಣದಲ್ಲಿ ಸಂಜೀವಿನಿ ಒಕ್ಕೂಟದ ಸಹಯೋಗದಲ್ಲಿ ಏರ್ಪಡಿಸಿದ್ದ ಜನಸುರಕ್ಷಾ ಪ್ರಚಾರ ಆಂದೋಲನದಲ್ಲಿ ಮಾತನಾಡಿ, ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರ ಬ್ಯಾಂಕ್ ಮೂಲಕ ಪಿಎಂಎಸ್‌ಬಿವೈ ಮತ್ತು ಪಿಎಂಜೆಜೆಬಿವೈ ವಿಮಾ ಯೋಜನೆ ನೋಂದಣಿ ಮಾಡಿಸಲು ಮಾಹಿತಿ ನೀಡುತ್ತಿದೆ. ಆದರೆ ಇನ್ನೂ ಕೆಲ ಭಾಗಗಳಲ್ಲಿ ಯೋಜನೆಗೆ ನಿಗದಿತ ಗುರಿ ಸಾಧಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಗ್ರಾಪಂ ಮಟ್ಟದಲ್ಲಿ ಪಂಚಾಯಿತಿ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಬಿಸಿಯೂಟ ಅಡುಗೆ ತಯಾರಿಸುವವರು, ಸ್ವಸಹಾಯ ಗುಂಪುಗಳ ಸದಸ್ಯರು ಯೋಜನೆ ಮಾಹಿತಿ ಅರಿತು ಪ್ರಯೋಜನವನ್ನು ಜನಸಾಮಾನ್ಯರಿಗೆ ತಿಳಿಸಬೇಕು. ಜನರಲ್ಲಿ ಗೊಂದಲ ಇದ್ದರೆ ಪರಿಹರಿಸಲು ಬ್ಯಾಂಕ್‌ಗಳಿಂದ ಅಗತ್ಯ ಸಹಕಾರ ನೀಡಲಾಗುತ್ತದೆ ಎಂದರು.

ಪಿಡಿಒ ಶೇಖರಪ್ಪ ಮಾತನಾಡಿ, ಕುಟುಂಬದಲ್ಲಿ ಅಪಘಾತ, ಮರಣ ಸಂಭವಿಸಿದರೆ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಡಿ ನೋಂದಾಯಿತ ಕುಟುಂಬಕ್ಕೆ ಆರ್ಥಿಕ ನೆರವು ಸಿಗಲಿದೆ ಎಂದು ಹೇಳಿದರು. ವ್ಯವಹಾರ ಪ್ರತಿನಿಧಿ ಎನ್.ವಿ.ವಸಂತ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಕವಿತಾ, ಎಸ್‌ಡಿಎ ವಿಶಾಲಾಕ್ಷಿ, ಒಕ್ಕೂಟದ ಪ್ರಮುಖರಾದ ಸುಜಾತಾ, ಪಾರ್ವತಿ, ಸೌಮ್ಯಾ, ಆಶಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net