ದನಗಳ ಕೊರಳಿಗೆ ರೇಡಿಯಂ ಪಟ್ಟಿ

3hos1p cow
ಹೊಸನಗರದಲ್ಲಿ ಬಿಡಾಡಿ ದನಗಳ ಕೊರಳಿಗೆ ರೇಡಿಯಂ ಪಟ್ಟಿ ಕಟ್ಟುತ್ತಿರುವುದು.
Published on

ಹೊಸನಗರ: ಪಟ್ಟಣದ ಬಸ್ ನಿಲ್ದಾಣ ಸೇರಿ ಪ್ರಮುಖ ಬೀದಿಗಳಲ್ಲಿ ಅಡ್ಡಾಡುವ ಬಿಡಾಡಿ ದನಗಳ ಕೊರಳಿಗೆ ಬಿಜೆಪಿ ಮುಖಂಡ ಹಾಲಗದ್ದೆ ಉಮೇಶ್ ನೇತೃತ್ವದ ತಂಡ ನೂರಕ್ಕೂ ಹೆಚ್ಚು ರೇಡಿಯಮ್ ಕೊರಳಪಟ್ಟಿ ಕಟ್ಟಿದರು.

ಹೊಸನಗರ ಪಟ್ಟಣ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸುತ್ತಿದ್ದು, ರೇಡಿಯಮ್ ಬೆಲ್ಟ್ ಹಾಕುವುದರಿಂದ ಅಪಘಾತ ತಪ್ಪಿಸುವ ಪ್ರಯತ್ನವನ್ನು ನಾವೆಲ್ಲರೂ ಸೇರಿ ಮಾಡುತ್ತಿದ್ದೇವೆ ಎಂದು ಉಮೇಶ್ ತಿಳಿಸಿದರು. ರಾತ್ರಿ ವೇಳೆ ರಸ್ತೆಯುದ್ದಕ್ಕೂ ಬಿಡಾಡಿ ದನಗಳು ಮಲಗಿರುತ್ತವೆ. ಮಂಗಳೂರು, ಕೊಲ್ಲೂರು, ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ನಿತ್ಯ ಹಲವಾರು ವಾಹನಗಳು ಸಂಚರಿಸುತ್ತವೆ. ಅಪಘಾತದಿಂದ ದನಗಳನ್ನು ರಕ್ಷಿಸುವುದು ನಮ್ಮ ಉದ್ದೇಶ ಎಂದು ತಿಳಿಸಿದ್ದಾರೆ.

ಬಿಜೆಪಿ ಪ್ರಮುಖರಾದ ಮಹೇಂದ್ರ, ಆಟೋ ಕುಮಾರ್, ಕಾರ್ತಿಕ್ ಭಂಡಾರಿ. ಸುಭಾಷ್, ಸುಮಿತ್, ಪವನ್, ನಿರಂಜನ್, ಶಶಾಂಕ್, ನಾಗರಾಜ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net