ಸಾರ್ವಜನಿಕರಿಗೆ ಸ್ಪಂದಿಸುವ ಮನೋಭಾವ ಅವಶ್ಯ

2sor1
ಸೊರಬದ ತಾಲೂಕು ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಬಿ.ಜೆ.ವಿನೋದ್ ಅವರನ್ನು ಬೀಳ್ಕೊಡಲಾಯಿತು. ಮಂಜುಳಾ ಹೆಗಡಾಳ್, ವಿ.ಎಲ್.ಶಿವಪ್ರಸಾದ್, ಯಶವಂತರಾಜ್ ಇತರರಿದ್ದರು.
Published on

ಸೊರಬ: ಸರ್ಕಾರಿ ವೃತ್ತಿಯಲ್ಲಿ ವರ್ಗಾವಣೆ ಸಹಜ ಪ್ರಕ್ರಿಯೆ, ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಕಾರ್ಯನಿರ್ವಹಿಸಿದ ಸಿಬ್ಬಂದಿ ಜನರ ನೆನೆಪಿನಲ್ಲಿರುತ್ತಾರೆ ಎಂದು ತಹಸೀಲ್ದಾರ್ ಮಂಜುಳಾ ಬಿ.ಹೆಗಡಾಳ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ಪ್ರಥಮದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ ಬಿ.ಜೆ.ವಿನೋದ್ ಅವರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸುವ ವೇಳೆ ಸಹದ್ಯೋಗಿಗಳು ಮತ್ತು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು. ಸಾರ್ವಜನಿಕರಿಗೆ ಸ್ಪಂದಿಸುವ ಮತ್ತು ಮಾರ್ಗದರ್ಶನ ನೀಡುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.

ಸನ್ಮಾನ ಸ್ವೀಕರಿಸಿದ ಕಂದಾಯ ಇಲಾಖೆ ಪ್ರಥಮದರ್ಜೆ ಸಹಾಯಕ ಬಿ.ಜೆ.ವಿನೋದ್ ಮಾತನಾಡಿ, 16 ವರ್ಷ ಸೊರಬದಲ್ಲಿ ಕರ್ತವ್ಯ ನಿರ್ವಹಿಸಿರುವುದು ಆತ್ಮ ತೃಪ್ತಿ ತಂದಿದೆ ಎಂದರು. ಕಂದಾಯ ಇಲಾಖೆ ನೌಕರರ ಜಿಲ್ಲಾಧ್ಯಕ್ಷ ವಿ.ಎಲ್.ಶಿವಪ್ರಸಾದ್, ತಾಲೂಕು ಗ್ರಾಮಾಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಯಶವಂತರಾಜ್, ಶಿರಸ್ತೇದಾರ ಎನ್.ಜೆ.ನಾಗರಾಜ್, ರಮೇಶ್, ಪಿ.ಲಲಿತಾ, ಉಪ ತಹಸೀಲ್ದಾರ್ ವೈ.ಎಸ್.ದೀಪಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net