ನಗರಸಭೆಯಿಂದ ತಾತ್ಕಾಲಿಕ ಪರಿಹಾರ ಒದಗಿಸಿ

06 SGR 03
ಸಾಗರದ ಶಿವಪ್ಪನಾಯಕ ನಗರಕ್ಕೆ ಭೇಟಿ ನೀಡಿ ಮನೆ ಬಿದ್ದ ಸ್ಥಳಗಳನ್ನು ಪರಿಶೀಲಿಸಿ ಸ್ಥಳೀಯರೊಂದಿಗೆ ಚರ್ಚಿಸಿದರು. ಗಣಪತಿ, ಮಧುಮಾಲತಿ ಮತ್ತಿತರರಿದ್ದರು.
Published on

ಸಾಗರ: ನಗರದ ವಿವಿಧೆಡೆಯಿಂದ ಮಳೆಯಿಂದ ಹಾನಿ ಸಂಭವಿಸಿದ್ದು, ನಗರಸಭೆಯಿಂದ ತಕ್ಷಣ ತಾತ್ಕಾಲಿಕ ಪರಿಹಾರ ಒದಗಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸೂಚಿಸಿದರು.

ನಗರದ ಶಿವಪ್ಪ ನಾಯಕ ನಗರದಲ್ಲಿ ರಾತ್ರಿ ಮಳೆಯಿಂದ ಮನೆ ಬಿದ್ದ ಸ್ಥಳಗಳಿಗೆ ಭೇಟಿ ನೀಡಿ ಮಾತನಾಡಿ, ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಷ್ಟದ ಅಂದಾಜು ತಯಾರಿಸಲಾಗುತ್ತಿದೆ. ತುರ್ತಾಗಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಮಕ್ಕಳನ್ನು ಶಾಲೆಗೆ ಕಳಿಸುವಾಗ ಪಾಲಕರು ಜಾಗ್ರತೆ ವಹಿಸಬೇಕು. ಮನೆ, ಕೊಟ್ಟಿಗೆ ಹಾನಿ ಉಂಟಾದರೆ ತಕ್ಷಣ ಕಚೇರಿ ಸಂಪರ್ಕಿಸಿ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಗಣಪತಿ ಮಂಡಗಳಲೆ, ಮಧುಮಾಲತಿ, ಉಮೇಶ್, ರವಿಕುಮಾರ್, ಮದನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net