ಜನಪದ ಸಾಹಿತ್ಯವನ್ನು ಉಳಿಸಿ-ಬೆಳೆಸಿ

12sgr2
ಸಾಗರದಲ್ಲಿ ಆಯೋಜಿಸಿದ್ದ ದ್ದ ಜಾನಪದ ಉತ್ಸವ ಕಾರ್ಯಕ್ರಮಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಿದರು. ಡಾ. ಸಣ್ಣಹನುಮಪ್ಪ, ಗಣಪತಿ ಮಂಡಗಳಲೆ, ಮಮತಾ ಹೆಗಡೆ ಇತರರಿದ್ದರು.
Published on

ಸಾಗರ: ಶತಮಾನಗಳಿಂದ ಕಲೆ, ಸಾಹಿತ್ಯ ಸಂಸ್ಕೃತಿ ಕಾಪಾಡಿಕೊಂಡು ಬಂದ ಗ್ರಾಮೀಣ ಜನರ ಮೌಖಿಕ ಸಾಹಿತ್ಯ ಅತ್ಯಂತ ಶ್ರೇಷ್ಠ. ಜಾನಪದ ನಮ್ಮ ನೆಲದ ಭದ್ರ ಕಲೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ನಗರದ ಮಹಾಗಣಪತಿ ದೇವಸ್ಥಾನ ಆವರಣದಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಿಂದ ಹಮ್ಮಿಕೊಳ್ಳಲಾಗಿದ್ದ ಜಾನಪದ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜಾನಪದ ರಥವನ್ನು ಯುವಪೀಳಿಗೆ ಮುನ್ನಡೆಸಿಕೊಂಡು ಹೋಗುವ ಮೂಲಕ ಕಲೆಗಳನ್ನು ಉಳಿಸಿ ಬೆಳೆಸಬೇಕು ಎಂದು ತಿಳಿಸಿದರು.

ಜಾನಪದ ಕಲಾವಿದರು ಅನುಭವದ ಮೂಲಕ ಕಲೆಗೆ ಪದರೂಪ ನೀಡಿದ್ದಾರೆ. ಆಧುನಿಕ ದಿನಗಳಲ್ಲಿ ಎಲ್ಲ ಕ್ಷೇತ್ರಗಳೂ ಬೆಳೆದಿವೆ. ಆದರೆ ಜಾನಪದ ಕ್ಷೇತ್ರ ಆಧುನಿಕತೆ ಅಬ್ಬರದಲ್ಲಿ ಕರಗಿ ಹೋಗಿಲ್ಲ. ಇಂದಿಗೂ ಕಲಾವಿದರು ಮೂಲ ಕಲೆ ಉಳಿಸಿ ಬೆಳೆಸಲು ಪ್ರಯತ್ನ ನಡೆಸಿದ್ದಾರೆ ಎಂದರು.

ಪ್ರಾಚಾರ್ಯ ಡಾ. ಸಣ್ಣಹನುಮಪ್ಪ, ಗಣಪತಿ ಮಂಡಗಳಲೆ, ಮಮತಾ ಹೆಗಡೆ, ಮಂಜಪ್ಪ, ಸುರೇಶ ಜಂಬಾನಿ, ಐ.ಜಿ.ಪ್ರಕಾಶ್, ಜಗದೀಶ್, ಗುರುಮೂರ್ತಿ, ಚಿದಂಬರ, ಜಿ.ಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net