ಶ್ರದ್ಧಾಂಜಲಿ ಪೋಸ್ಟರ್ ಹಾಕಬೇಡಿ: ಜಗದೀಶ್ ಕಾರಂತ್

karanth
Published on

ಶಿವಮೊಗ್ಗ: ಹಿಂದು ಸಮಾಜ ಎಚ್ಚೆತ್ತುಕೊಳ್ಳುವುದು ಯಾವಾಗ? ನಮ್ಮ ಮೇಲೆ ಅನೇಕ ಅಕ್ರಮಣಗಳು ನಡೆದರೂ ನಮಗೆ ಬುದ್ದಿ ಬಂದಿಲ್ಲ. ನಮ್ಮ ಯುವಕರ ಕೊಲೆಗಳಾದ ಮೇಲೆ ಸಭೆ ನಡೆಸುತ್ತೇವೆ. ಇದರಿಂದ ಪ್ರಯೋಜನವಿಲ್ಲ. ಇನ್ನು ಮುಂದೆ ಶ್ರದ್ಧಾಂಜಲಿ ಪೋಸ್ಟರ್‌ಗಳನ್ನು ಹಾಕುವ ಬದಲು ಕ್ರಿಯೆ ತಕ್ಕ ಪ್ರತಿಕ್ರಿಯೆ ತೋರಿ ಎಂದು ಹಿಂದು ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಹೇಳಿದರು.

ಹಿಂದು ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಕಾರ್ಯಕರ್ತರ ತ್ರೈವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸರ್ಪಕ್ಕೆ ಹಾಲೆರೆದು ಘಟಸರ್ಪವನ್ನಾಗಿ ಮಾಡಿ ಅದು ಕಚ್ಚಿದ ಮೇಲೆ ಎಚ್ಚರಗೊಳ್ಳುವ ಬದಲು ದುಷ್ಟರನ್ನು ಬೆಳೆಸುವ ಮೊದಲೇ ಎಚ್ಚೆತ್ತುಕೊಳ್ಳೋಣ. 2047ಕ್ಕೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವ ಹುನ್ನಾರ ನಡೆಯುತ್ತಿರುವುದು ಎನ್‌ಐಎ ತನಿಖೆಯಲ್ಲಿ ಬಯಲಾಗಿದೆ. ಹೀಗಾಗಿ ಶತ್ರುಗಳ ಷಡ್ಯಂತ್ರಕ್ಕೆ ತಕ್ಕ ನೀತಿ ರೂಪಿಸಲೇಬೇಕು. ಮಾರ್ಗಗಳನ್ನು ಹುಡುಕಲೇ ಬೇಕಿದೆ ಎಂದರು.

ನಾಯಿ ಬಾಲ ಅಲ್ಲಾಡಿಸುವುದು ಪ್ರಾಕೃತಿಕವಾಗಿ ಸಹಜ ಪ್ರಕ್ರಿಯೆ. ಆದರೆ ಬಾಲವೇ ನಾಯಿಯನ್ನು ಅಲ್ಲಾಡಿಸಿದರೆ ಅದು ಬಾಲದ ಸಾಮರ್ಥ್ಯವಲ್ಲ. ನಾಯಿಯ ದೌರ್ಬಲ್ಯ ಎಂದು ವ್ಯಂಗ್ಯವಾಗಿ ಹೇಳಿದರು. 1947ರಲ್ಲಿ ಧರ್ಮದ ಹೆಸರನ್ನು ಒಡೆದವರು ಇಂದು ಸಂಘ ಪರಿವಾರವನ್ನು ದೂಷಿಸುತ್ತಿದ್ದಾರೆ. ಧರ್ಮದ ಆಧಾರದಲ್ಲೇ ಪಾಕಿಸ್ತಾನ ರಚನೆಯಾದ ಮೇಲೆ ಹಿಂದುಗಳಿಗೆ ಮಾತ್ರ ಎಂದು ಏಕೆ ಭಾರತವನ್ನು ಮೀಸಲಿಡಲಿಲ್ಲ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net