ಸಮಾಜಸೇವೆಯಿಂದ ಮನಸ್ಸಿಗೆ ನೆಮ್ಮದಿ

25sgr2
ಸಾಗರದ ಸಂತ ಜೋಸೆಫರ ಸಮುದಾಯ ಭವನಕ್ಕೆ ಲಯನ್ಸ್ ಕ್ಲಬ್‌ನಿಂದ ವಿಶ್ವ ಸೇವಾ ದಿನ ಪ್ರಯುಕ್ತ ವ್ಹೀಲ್‌ಚೇರ್ ನೀಡಲಾಯಿತು. ಎಂ.ನಾಗರಾಜ್, ವಿನುತ್ ಬಾಲರಾಜ್, ಟಿ.ಪ್ರಸನ್ನ ಇತರರಿದ್ದರು.
Published on

ಸಾಗರ: ದಾನ ನೀಡುವುದು, ಇನ್ನೊಬ್ಬರ ನೋವಿಗೆ ಸ್ಪಂದಿಸುವುದು ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವುದರಿಂದ ತೃಪ್ತಿ ಸಿಗುತ್ತದೆ ಎಂದು ಸಂತ ಜೋಸೆಫರ ದೇವಾಲಯದ ಧರ್ಮಗುರು ವಿನುತ್ ಬಾಲರಾಜ್ ಹೇಳಿದರು.

ಸಂತ ಜೋಸೆಫರ ಸಮುದಾಯ ಭವನದಲ್ಲಿ ಲಯನ್ಸ್ ಕ್ಲಬ್‌ನಿಂದ ವಿಶ್ವ ಸೇವಾ ದಿನ ಪ್ರಯುಕ್ತ ದಾನಿ ಎಂ.ನಾಗರಾಜ್ ಚರ್ಚ್‌ಗೆ ದೇಣಿಗೆಯಾಗಿ ನೀಡಿದ ವ್ಹೀಲ್‌ಚೇರ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ಮಾಡುವ ಕೆಲಸಗಳು ಇನ್ನೊಬ್ಬರಿಗೆ ಪ್ರೇರಣೆ ಆಗಬೇಕು. ಲಯನ್ಸ್ ಸಂಸ್ಥೆ ಸೇವಾ ಕಾರ್ಯ ಅನುಕರಣೀಯ ಎಂದು ತಿಳಿಸಿದರು.

ಎಂ.ನಾಗರಾಜ್ ಮಾತನಾಡಿ, ನಮ್ಮ ಆದಾಯದ ಸ್ವಲ್ಪ ಹಣವನ್ನು ಸಮಾಜಮುಖಿ ಕೆಲಸಗಳಿಗೆ ಬಳಸಬೇಕು. ಲಯನ್ಸ್ ಕ್ಲಬ್ ಮಾರ್ಗದರ್ಶನದಲ್ಲಿ ಚರ್ಚ್ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ವ್ಹೀಲ್‌ಚೇರ್ ನೀಡಲಾಗಿದೆ ಎಂದರು.

ಲಯನ್ಸ್ ಸಂಸ್ಥೆಯ ಅಶ್ವಿನಿಕುಮಾರ್, ಲಯನ್ಸ್ ಅಧ್ಯಕ್ಷ ಡಾ. ಟಿ.ಪ್ರಸನ್ನ, ವಕೀಲ ಇ.ನಾಗರಾಜ್, ಅಲ್ಬರ್ಟ್ ವಿಕ್ಟರ್ ಫರ್ನಾಂಡೀಸ್, ಪ್ರಕಾಶ್, ಮೈಕಲ್ ಡಿಸೋಜ, ಸುಧೀರ್ ಶೆಟ್ಟಿ, ವಿನಯಕುಮಾರ್, ಪ್ರಭಾವತಿ ಶ್ರೀಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net