ಎನ್‌ಎಸ್‌ಎಸ್‌ನಿಂದ ಸೇವಾ ಭಾವನೆ ವೃದ್ಧಿ

3 skp 1
ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿಯಲ್ಲಿ ಆಯೋಜಿಸಿದ್ದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಶಿಬಿರವನ್ನು ಪ್ರಾಚಾರ್ಯ ಡಾ. ಶಿವಕುಮಾರ್ ಉದ್ಘಾಟಿಸಿದರು. ಮಂಜಮ್ಮ, ಕುಮಾರಸ್ವಾಮಿ, ವಿಜಯಲಕ್ಷ್ಮೀ ಇತರರಿದ್ದರು.
Published on

ಶಿಕಾರಿಪುರ: ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ಶ್ರೇಷ್ಠ ಕಾರ್ಯ ಎಂದು ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಿ.ಎಸ್.ಶಿವಕುಮಾರ್ ಹೇಳಿದರು.

ಸಮೀಪದ ಕಾಳೇನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಸೇವೆ ಮಾಡುವಾಗ ಮನಸು ಮೊದಲು ರಾಗದ್ವೇಷಗಳಿಂದ ಮುಕ್ತವಾಗುತ್ತದೆ. ಸೇವೆಯನ್ನು ಪ್ರೀತಿಯಿಂದ ಮಾಡಬೇಕು. ಸಮಾಜಕ್ಕೆ ನಮ್ಮ ಸೇವಾ ಕಾರ್ಯಗಳು ಸದ್ವಿನಿಯೋಗ ಆಗಬೇಕು ಎಂದು ತಿಳಿಸಿದರು.

ಶಿಸ್ತು, ಸಂಯಮ, ಶ್ರಮ ಹಾಗೂ ಸೇವಾ ಭಾವನೆಯ ಮಹತ್ವವನ್ನು ಎನ್‌ಎಸ್‌ಎಸ್ ಶಿಬಿರ ಕಲಿಸುತ್ತದೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾಗುತ್ತದೆ. ಭ್ರಾತ್ವತ್ವ ಭಾವನೆ ಬೆಳೆಸುತ್ತದೆ. ಯುವಜನರು ಮೊಬೈಲ್ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕಷ್ಟಪಟ್ಟು ದುಡಿಯುವ, ಉತ್ತಮ ಜೀವನ ಕಟ್ಟಿಕೊಳ್ಳುವ ಬಗ್ಗೆ ಎನ್‌ಎಸ್‌ಎಸ್ ಶಿಬಿರ ಅರಿವು ಮೂಡಿಸುತ್ತದೆ ಎಂದು ತಿಳಿಸಿದರು.

ಭದ್ರಾಪುರ ಗ್ರಾಪಂ ಅಧ್ಯಕ್ಷೆ ಮಂಜಮ್ಮ ಜ್ಞಾನೇಶ್, ಎಸ್‌ಡಿಎಂಸಿ ಅಧ್ಯಕ್ಷ ಕುಮಾರಸ್ವಾಮಿ, ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ ಕುಲಕರ್ಣಿ, ಹನುಮಂತಪ್ಪ, ಯಲ್ಲಪ್ಪ, ಉಪನ್ಯಾಸಕ ಡಾ. ವೀರೇಂದ್ರ ವಾಲಿ, ಡಾ. ದೇವರಾಜ್, ಡಾ. ರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net