ಹೆಚ್ಚುವರಿ ಸಾಲ ವಿತರಣೆಗಿಲ್ಲ ಅವಕಾಶ

22sor3
ಹಳೇ ಸೊರಬದ ಪಿಎಸಿಎಸ್ ವಾರ್ಷಿಕ ಸಭೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜೆ.ಪ್ರಕಾಶ್, ರಂಗನಾಥ್, ಸುನೀಲ್, ದೇವಕಿ ಪಾಣಿರಾಜಪ್ಪ ಇತರರಿದ್ದರು.
Published on

ಸೊರಬ: ಹಳೇ ಸೊರಬ ಪಿಎಸಿಎಸ್ 49 ವರ್ಷ ಪೂರೈಸಿದ್ದು, ಮುಂದಿನ ವರ್ಷ ಅದ್ದೂರಿಯಾಗಿ 50ನೇ ವರ್ಷದ ಸಂಭ್ರಮಾಚರಣೆ ಮಾಡಲು ಸದಸ್ಯರು ಸಹಕಾರ ನೀಡಬೇಕು ಎಂದು ಸಂಘದ ಅಧ್ಯಕ್ಷ ಜೆ.ಪ್ರಕಾಶ್ ಹೇಳಿದರು.

ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಂಘದ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ವರ್ಷದಲ್ಲಿ ಸಂಘವು ಒಟ್ಟು 7.26 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದರು. ಸರ್ಕಾರದಿಂದ ಸಹಕಾರ ಸಂಘಕ್ಕೆ ಹಣಕಾಸಿನ ನೆರವು ಸಿಕ್ಕಿಲ್ಲ. ಆದ್ದರಿಂದ ಹೆಚ್ಚುವರಿ ಸಾಲ ನೀಡಲು ಅವಕಾಶವಿಲ್ಲ. ನೀಡಿರುವ ಸಾಲವನ್ನು ರೈತರು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ ಸಂಘದಲ್ಲಿ ಬಂಡವಾಳವಾಗಿ ಪರಿವರ್ತನೆ ಆಗಲಿದೆ. ಸ್ವಂತ ಬಂಡವಾಳ ಸೃಜಿಸಿಕೊಂಡು ಅಗತ್ಯವಿರುವವರೆಗೆ ಸಾಲ ನೀಡಬೇಕಿದೆ. ಸಚಿವರ ಮೂಲಕ ಒತ್ತಡ ತಂದು ಸರ್ಕಾರದಿಂದ ಹೆಚ್ಚುವರಿ ಸಾಲ ಪಡೆಯಲು ಶ್ರಮಿಸಲಾಗುವುದು ಎಂದು ತಿಳಿಸಿದರು.

ರೈತರು ಕೃಷಿ ಉತ್ಪಾದನೆಯಲ್ಲಿ ಬಂದ ಲಾಭವನ್ನು ಸಂಘದಲ್ಲಿ ಹೂಡಿಕೆ ಮಾಡಿದರೆ ಬ್ಯಾಂಕ್‌ನಲ್ಲಿ ನೀಡುವ ಬಡ್ಡಿ ನೀಡುತ್ತೇವೆ. ಇದರಿಂದ ಸಣ್ಣ ರೈತರಿಗೆ ಸಾಲ ನೀಡಲು ಅನುಕೂಲವಾಗುತ್ತದೆ. ಸಹಕಾರ ಸಂಘದ ಬಲವರ್ಧನೆಗೆ ಕಾರಣವಾಗುತ್ತದೆ ಎಂದರು.

ಸಂಘದ ಉಪಾಧ್ಯಕ್ಷ ರಂಗನಾಥ್, ಸಂಘದ ಸಿಇಒ ಸುನೀಲ್, ನಿರ್ದೇಶಕರಾದ ದೇವಕಿ ಪಾಣಿರಾಜಪ್ಪ, ಮಹೇಂದ್ರ, ಪಾಣಿ ಡಾಕಪ್ಪ, ಸತೀಶ ಗೌಡ, ಮಲ್ಲಿಕಾರ್ಜುನ ಗೌಡ, ವಿಜೇಂದ್ರ, ಜಗನ್ನಾಥ್, ವಿನಾಯಕ ಕಾನಡೆ, ಲಕ್ಷ್ಮಮ್ಮ, ರಾಧಮ್ಮ, ಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಕೃಷ್ಣನಾಯಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net