ಸೆಪ್ಟೆಂಬರ್‌ನಲ್ಲಿ ನವರಾತ್ರಿ ನಮಸ್ಯಾ ಸಮಾಜ ಸಂಭ್ರಮ

27sgr3a
Published on

ಸಾಗರ: ರಾಮಚಂದ್ರಾಪುರ ಮಠದ ಶ್ರೀಗಳು ಕೈಗೊಳ್ಳುವ ನವರಾತ್ರಿ ವ್ರತವು ಲೋಕಕಲ್ಯಾಣಕ್ಕೆ ಪ್ರಾರ್ಥಿಸಿ ಕೈಗೊಳ್ಳುವ ಜಗನ್ಮಾತೆಯ ಪೂಜೆ ಎಂದು ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು ಹೇಳಿದರು.

ಸೆಪ್ಟೆಂಬರ್‌ನಲ್ಲಿ ಸಾಗರದ ಶ್ರೀ ರಾಘವೇಶ್ವರ ಭವನದಲ್ಲಿ ಆಯೋಜಿಸಲಿರುವ ನವರಾತ್ರಿ ನಮಸ್ಯಾ ಸಮಾಜ ಸಂಭ್ರಮ ಕುರಿತು ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಸಂದೇಶಾಮೃತ ದೃಶ್ಯ ಅವತರಣಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನವರಾತ್ರಿಯ ಎಲ್ಲ ದಿನ ವ್ರತಾನುಷ್ಠಾನದಲ್ಲಿದ್ದು, ನವರಾತ್ರಿ ನಂತರವೇ ಭಿಕ್ಷೆ ಸೇವಿಸುವುದು ಶ್ರೀಗಳ ನವರಾತ್ರಿ ವ್ರತಕ್ಕಿರುವ ಮಹತ್ವ. ಮಠದ ಕಾರ್ಯಗಳು ಸಮಷ್ಠಿ ಸಮಾಜದೊಂದಿಗೆ ನಡೆಯಲಿವೆ. ನವರಾತ್ರಿ ಉತ್ಸವ ಸಾಗರ ಪ್ರಾಂತ್ಯಕ್ಕೆ, ಹವ್ಯಕ ಸಮಾಜಕ್ಕೆ ಮಾತ್ರ ಸೀಮಿತವಾಗಿರದೆ ಜಗನ್ಮಾತೆಯ ಮಕ್ಕಳು ಎಲ್ಲರೂ ಪೂಜಾಸೇವೆಯಲ್ಲಿ ಪಾಲ್ಗೊಂಡು ಧನ್ಯತೆ ಪಡೆಯುವ ಕಾರ್ಯಕ್ರಮ ಎಂದರು.

ಪ್ರತಿಯೊಂದು ಕಾರ್ಯಕ್ಕೂ ಸಂಘಟಿತ ಪ್ರಯತ್ನ ಇದ್ದರೆ ಯಶಸ್ಸು ಸಾಧ್ಯ. ಸಮಷ್ಠಿ ಭಾವದಿಂದ ಜಗನ್ಮಾತೆ ಪೂಜೆಗೆ ಎಲ್ಲರೂ ಒಂದಾಗುವ ಭಾಗ್ಯ ಸಾಗರ ನಗರಕ್ಕೆ ಬಂದಿದೆ. ಪ್ರತಿ ಮನೆಯಲ್ಲೂ ನವರಾತ್ರಿ ಉತ್ಸವ ನಡೆಸಿದ ಪುಣ್ಯದ ಫಲವೂ ಇದೆ ಎನ್ನುವ ನಂಬಿಕೆ ನಮ್ಮಲ್ಲಿದೆ. ಹರನಾಥರಾವ್ ಮತ್ತಿಕೊಪ್ಪ ಸಹಕಾರ ರತ್ನ ಪುರಸ್ಕೃತ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಸಿಗಂದೂರು ದೇವಸ್ಥಾನದ ಪ್ರಧಾನ ಅರ್ಚಕ ಶೇಷಗಿರಿ ಭಟ್, ಸಾಂಪ್ರದಾಯಿಕ ಆಚರಣೆ ಮತ್ತು ಆರಾಧನೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರಬೇಕು. ಎಲ್ಲರೂ ಅದರಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಾರ್ಗದರ್ಶಕ ಸಮಿತಿಯ ಸಮರ್ಥ ಭಟ್, ಸಾಗರ ಹವ್ಯಕ ಮಂಡಲ ಅಧ್ಯಕ್ಷ ಮುರಳಿ, ಹವ್ಯಕ ಮಹಾಮಂಡಲದ ಪ್ರಾಂತ್ಯ ಉಪಾಧ್ಯಕ್ಷ ಶಾಂತರಾಮ, ವೈದಿಕ ಪ್ರಧಾನ ವಿನಾಯಕ ಭಟ್, ಪ್ರಧಾನರಾದ ರುಕ್ಮಾವತಿ ರಾಮಚಂದ್ರ, ರಮೇಶ್ ಹೆಗಡೆ ಗುಂಡೂಮನೆ, ರಾಮಚಂದ್ರಾಪುರ ಹವ್ಯಕ ಮಂಡಲದ ಅಧ್ಯಕ್ಷ ಪ್ರಕಾಶ್ ಬೇರಾಳ, ಸತೀಶ್, ಡಾ. ರಾಮಚಂದ್ರ ಭಾಗವತ್, ಗುರುಪ್ರಸಾದ್, ಜಿ.ವಿ.ತಿಮ್ಮಪ್ಪ, ನಾರಾಯಣ, ಪ್ರಸನ್ನ ಹೆಗಡೆ ಕೆರೆಕೈ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net