

ರಿಪ್ಪನ್‌ಪೇಟೆ: ಶ್ರದ್ಧಾಭಕ್ತಿಯೊಂದಿಗೆ ಧರ್ಮದ ಗುರುಗಳನ್ನು ವಿಶೇಷ ಅತಿಥ್ಯದಲ್ಲಿ ಕಾಣುವ ಮಲೆನಾಡಿಗರಲ್ಲಿ ಹೃದಯ ವೈಶಾಲ್ಯ ಜಾಸ್ತಿ ಎಂದು ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಸಮೀಪದ ಕೋಣಂದೂರು ಉದ್ಯಮಿ ಕೆ.ಆರ್.ಪ್ರಕಾಶ್ ಮನೆಗೆ ಭೇಟಿ ನೀಡಿದ ಅವರು ಮಾತನಾಡಿ, ಇಂತಹ ಪರಿಸರ ಮತ್ತು ಸುಂದರ ಪ್ರಕೃತಿಯ ವಾತಾವರಣದಲ್ಲಿ ಬದುಕುತ್ತಿರುವ ನೀವುಗಳೇ ಧನ್ಯರು ಎಂದು ತಿಳಿಸಿದರು. ಸಿದ್ಧಗಂಗಾ ಶ್ರೀಗಳನ್ನು ಅದ್ದೂರಿಯಾಗಿ ಸ್ವಾಗತಿಸಿ ಪಾದಪೂಜೆ ನೇರವೇರಿಸಲಾಯಿತು.
ಶಾಸಕ ಆರಗ ಜ್ಞಾನೇಂದ್ರ ಅವರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ನಂತರ ಶ್ರೀಗಳಿಗೆ ಗೌರವಾರ್ಪಣೆ ಮಾಡಿದರು. ನಂತರ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಕೋಣಂದೂರು ಬೃಹನ್ಮಠಕ್ಕೆ ಭೇಟಿ ನೀಡಿದರು. ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮಿಜಿ, ಕೋಣಂದೂರು ಮಠದ ಶ್ರೀ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಪಾರ್ವತಮ್ಮ, ಉದ್ಯಮಿ ಕೆ.ಆರ್.ಪ್ರಕಾಶ್, ಕೆ.ಆರ್.ಪ್ರಸನ್ನ, ಕೆ.ಆರ್.ಪ್ರಸಾದ್, ಕೆ.ಆರ್.ಪ್ರಶಾಂತ್, ಅಮೃತ ಗ್ರಾಪಂ ಅಧ್ಯಕ್ಷ ಸಚಿನ್ ಗೌಡ ಇತರರಿದ್ದರು.