ಕಣ್ಣು, ಪತಿ ಕಳೆದುಕೊಂಡವರಿಗೆ ಕೊನೆಗೂ ಪರಿಹಾರ

27 smg 1 (1)
Published on

ಶಿವಮೊಗ್ಗ: ಅಪಘಾತದಲ್ಲಿ ಎರಡೂ ಕಣ್ಣು ಕಳೆದುಕೊಂಡ ವ್ಯಕ್ತಿ ಹಾಗೂ ಬದುಕಿಗೆ ಆಧಾರವಾಗಿದ್ದ ಗಂಡನನ್ನೇ ಕಳೆದುಕೊಂಡು ಮಹಿಳೆಗೆ ಹಲವು ವರ್ಷಗಳ ನಂತರ ಕೊನೆಗೂ ನ್ಯಾಯ ದಕ್ಕಿತು.
ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ನಡೆದ ಬೃಹತ್ ಲೋಕ ಅದಾಲತ್‌ನಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ಎ.ಮುಸ್ತಫಾ ಹುಸೇನ್ ಅವರು ಪರಿಹಾರದ ಚೆಕ್ ವಿತರಿಸಿದರು.
ಎರಡು ವರ್ಷದ ಹಿಂದೆ ಶಿಕಾರಿಪುರ ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದ ಗಣಪತಿ ಅವರು ಬೈಕ್‌ನಲ್ಲಿ ತೆರೆಳುವಾಗ ಹಿಂಬದಿಯಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಗಣಪತಿ ಅವರ ಎರಡೂ ಕಣ್ಣುಗಳು ಹೋಗಿದ್ದವು. ಈ ಬಗ್ಗೆ ಹೆಚ್ಚಿನ ಪರಿಹಾರಕ್ಕೆ ಗಣಪತಿ ಅವರು ವಿಮಾ ಕಂಪನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದ ನ್ಯಾಯಾಧೀಶ ಮುಸ್ತಫಾ ಹುಸೇನ್ ಅವರು ಯುನೈಟೆಡ್ ವಿಮಾ ಕಂಪನಿಯೊಂದಿಗೆ ರಾಜಿ ಸಂಧಾನ ಮಾಡಿ 17 ಲಕ್ಷ ರೂ. ಪರಿಹಾರದ ಚೆಕ್ ಹಸ್ತಾಂತರಿಸಿದರು.
ಮತ್ತೊಂದು ಪ್ರಕರಣದಲ್ಲಿ ನಾಲ್ಕು ವರ್ಷದ ಹಿಂದೆ ಮಾನರ್ಮಿಬೈಲ್‌ನ ಸಿ.ಆನಂದಬಾಬು ಅವರು ಡಿಸೇಲ್ ಟ್ಯಾಂಕರ್ ಡಿಕ್ಕಿಯಾಗಿ ಶಂಕರಮಠ ರಸ್ತೆಯಲ್ಲಿ ಮೃತಪಟ್ಟಿದ್ದರು. ಈ ರಾಜಿ ಸಂಧಾನ ನಡೆಸಿದ ನ್ಯಾಯಾಧೀಶರು ಸಂತ್ರಸ್ತ ಕುಟುಂಬಕ್ಕೆ 18 ಲಕ್ಷ ರೂ. ಪರಿಹಾರದ ಚೆಕ್ ಹಸ್ತಾಂತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net