

ಹೊಸನಗರ: ಸಾಹಿತ್ಯ ಎಂಬುದು ಕೃತಿ, ಕಾರ್ಯಕ್ರಮಕ್ಕೆ ಸೀಮಿತವಲ್ಲ. ಬದುಕಿನಲ್ಲಿ, ನಾವು ಮಾಡುವ ವೃತ್ತಿಯಲ್ಲಿ ಅಡಕವಾಗಿದೆ ಎಂದು ವೈದ್ಯಾಧಿಕಾರಿ ಡಾ. ಲಿಂಗರಾಜ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಹೊಸನಗರ ಘಟಕ, ಜಿಮ್ಮಿ ಜಾರ್ಜ್ ವಾಲಿಬಾಲ್ ಕ್ಲಬ್ ಆಶ್ರಯದಲ್ಲಿ ಏರ್ಪಡಿಸಿದ್ದ ವಸುದೇವ ಭೂಪಾಳಂ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಿನನಿತ್ಯದ ಬದುಕಿನಲ್ಲಿ, ಮಾತಿನಲ್ಲಿ ಸಾಹಿತ್ಯದ ಅನುಭವ ದೊರೆಯುತ್ತದೆ ಎಂದು ತಿಳಿಸಿದರು. ನಂತರ ಹಳೇ ಕವಿತೆಗಳನ್ನು ಓದಿದರು. ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಜಿ.ನಾಗರಾಜ್ ಮಾತನಾಡಿ, ಆಂಗ್ಲ ಭಾಷೆ ವ್ಯಾಮೋಹ ಹೆಚ್ಚುತ್ತಿರುವುದು ಬೇಸರದ ಸಂಗತಿ ಎಂದರು.
ವಸುದೇವ ಭೂಪಾಳಂ ಅವರ ಬದುಕು ಬರಹ ಕುರಿತು ಡಾ. ಮಾರ್ಷಲ್ ಶರಾಂ ಉಪನ್ಯಾಸ ನೀಡಿದರು. ವಾಲಿಬಾಲ್ ಕ್ರೀಡಾಪಟುಗಳು ಇಷ್ಟದ ಕವಿತೆಗಳನ್ನು ಓದಿದರು. ಕಸಾಪ ನಿಕಟಪೂರ್ವ ಅಧ್ಯಕ್ಷ ಇಲಿಯಾಸ್ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಕಸಾಪ ತಾಲೂಕು ಅಧ್ಯಕ್ಷ ಗಣೇಶಮೂರ್ತಿ, ನವೀನ್, ಅಶ್ವಿನಿ ಪಂಡಿತ್, ಜಿಮ್ಮಿ ಜಾರ್ಜ್ ವಾಲಿಬಾಲ್ ಸದಸ್ಯರು ಇದ್ದರು.