ಯುವಜನರು ರಕ್ತದಾನಕ್ಕೆ ಮುಂದಾಗಲಿ

6sor5
ಸೊರಬದ ಉದ್ರಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ತಾಪಂ ಇಒ ಡಾ. ಎನ್.ಆರ್.ಪ್ರದೀಪ್ ಕುಮಾರ್ ಉದ್ಘಾಟಿಸಿದರು. ಡಾ. ಎಂ.ಕೆ.ಮಹೇಶ್, ಡಾ. ಪ್ರಭು ಸಾಹುಕಾರ್, ಡಾ. ವಿನಯ್ ಪಾಟೀಲ್ ಇತರರಿದ್ದರು.
Published on

ಸೊರಬ: ರಕ್ತಕ್ಕೆ ಪರ್ಯಾಯವಿಲ್ಲ. ಕೃತಕ ಉತ್ಪಾದನೆಯೂ ಸಾಧ್ಯವಿಲ್ಲ. ದಾನದಿಂದ ಮಾತ್ರ ರಕ್ತ ಸಂಗ್ರಹಿಸಬಹುದು. ಹಾಗಾಗಿ ಆರೋಗ್ಯವಂತರು ರಕ್ತದಾನ ಮಾಡಬೇಕು ಎಂದು ತಾಪಂ ಇಒ ಡಾ. ಎನ್.ಆರ್.ಪ್ರದೀಪ್‌ಕುಮಾರ್ ಹೇಳಿದರು.

ತಾಲೂಕಿನ ಉದ್ರಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಶ್ರೀ ವೀರಭದ್ರೇಶ್ವರ ಯುವಕ ಸಂಘ, ಉದ್ರಿ ಗ್ರಾಪಂನಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿ, ಎಲ್ಲರ ಸಹಕಾರದಿಂದ ಇಂತಹ ಶಿಬಿರಗಳು ಹೆಚ್ಚು ನಡೆಯಬೇಕು ಎಂದು ತಿಳಿಸಿದರು.

ಉದ್ರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಎಂ.ಕೆ.ಮಹೇಶ್ ಮಾತನಾಡಿ, ರಕ್ತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ದೃಷ್ಟಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಸಹಕಾರ ನೀಡಿದ್ದಾರೆ ಎಂದರು.

ಸೊರಬ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಪ್ರಭು ಸಾಹುಕಾರ್, ತಾಲೂಕು ವೈದ್ಯಾಧಿಕಾರಿ ವಿನಯ್ ಪಾಟೀಲ್ ರಕ್ತದಾನ ಮಾಡಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಮಂಜುನಾಥ್, ಡಾ. ಮುರಳಿಧರ್, ಡಾ. ನದ್ಾ, ಡಾ. ಮಲ್ಲಪ್ಪ, ಡಾ. ಗಂಗಾ, ಪಿಡಿಒ ಹೋಮೇಶ್, ಜನದನಿ ಸಂಸ್ಥೆ ವಿಜಯ್‌ಕುಮಾರ್, ಪ್ರಾಚಾರ್ಯ ಪರಮೇಶ್ವರಪ್ಪ, ಕರವೇ ಅಧ್ಯಕ್ಷ ಸಿ.ಕೆ.ಬಲೀಂದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net