ಕರಾಟೆ ತರಬೇತಿ ಶಿಕ್ಷಣದ ಭಾಗವಾಗಲಿ

8hos1p karate
ಹೊಸನಗರದಲ್ಲಿ ಏರ್ಪಡಿಸಿದ್ದ ಕರಾಟೆ ಸ್ಪರ್ಧೆಯಲ್ಲಿ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ಸಿ.ಎ.ವಿಜಯನ್, ಮೋಹನ ಶೆಟ್ಟಿ, ರಾಘವೇಂದ್ರ, ಹರೀಶ್, ಶ್ರೀಧರ ಶೆಟ್ಟಿ, ಲಕ್ಷ್ಮಣ ಆಚಾರ್ಯ ಇತರರಿದ್ದರು.
Published on

ಹೊಸನಗರ: ಕರಾಟೆ ತರಬೇತಿಗೆ ಸೀಮಿತವಾಗದೆ ಶಿಕ್ಷಣದ ಭಾಗವಾಗಬೇಕು ಎಂದು ಬ್ಲಾಸಂ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ಕೋಡೂರು ಬಿ.ಜಿ.ಚಂದ್ರಮೌಳಿ ಹೇಳಿದರು.

ಪಟ್ಟಣದ ಈಡಿಗರ ಸಭಾಭವನದಲ್ಲಿ ಎಎಸ್‌ಎಂಎ ಕರ್ನಾಟಕ, ತಾಲೂಕು ಕರಾಟೆ ಶಿಕ್ಷಕರ ಸಂಘ, ತಾಲೂಕಿನ ವಿವಿಧ ವಿದ್ಯಾಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಎಎಸ್‌ಎಂಎ ರಾಜ್ಯಮಟ್ಟದ ಕರಾಟೆ ಸ್ಪರ್ಧೆ, 12ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿ, ಕರಾಟೆ ಶಿಕ್ಷಣದ ಮಹತ್ವ ಅರಿತಿರುವ ಪಾಲಕರು ಸ್ವಯಂಪ್ರೇರಣೆಯಿಂದ ಮಕ್ಕಳಿಗೆ ಕರಾಟೆ ತರಬೇತಿ ಕೊಡಿಸುತ್ತಿದ್ದಾರೆ ಎಂದು ತಿಳಿಸಿದರು.

ಕರಾಟೆಯಲ್ಲಿ ಸಾಧಕರಾದ ರಿಷಬ್ ರವಿ, ಅನಿರುದ್ಧ ಎ. ಪ್ರಭು, ಆರ್.ಅರ್ಜುನ್, ವಿಶ್ವಾತ್ಮ, ಜಾಹ್ನವಿ ಪ್ರವೀಣ್, ಶೃತಕೀರ್ತಿ ಶಿವಶಂಕರ ಹಿರೇಮಠ, ಪೃಥ್ವಿ ಪ್ರಕಾಶ್, ಪುಷ್ಕರ ಹೆಗಡೆ, ಸ್ಫೂರ್ತಿ ಕುಲಾಲ್, ಕೆ.ಅನ್ವಿತಾ, ಜೆ.ಭುವನವರ್ಧಿ, ಚಿನ್ಮಯ್, ಶ್ರೀಷ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಾಲಚಂದ್ರ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಎಸ್‌ಎಂಎ ಕರ್ನಾಟಕದ ಅಧ್ಯಕ್ಷ ಜೆ.ಕೆ.ರಾಘವೇಂದ್ರ, ಮಲೆನಾಡಿನ ವಿದ್ಯಾರ್ಥಿಗಳು ಕರಾಟೆ ಶಿಕ್ಷಣದಲ್ಲಿ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದು, ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ ಎಂದರು.

ರಾಷ್ಟ್ರೀಯ ಕೋಚ್ ಕೇರಳದ ಸಿ.ಎ.ವಿಜಯನ್, ಎಎಸ್‌ಎಂಎ ಉಪಾಧ್ಯಕ್ಷ ಕೆ.ವಿ.ಲಕ್ಷ್ಮಣ ಆಚಾರ್ಯ, ಹೊಸನಗರ ತಾಲೂಕು ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಎಸ್.ಹರೀಶ್‌ಕುಮಾರ್, ಗೌರವಾಧ್ಯಕ್ಷ ಮೋಹನ ಶೆಟ್ಟಿ, ತಾಪಂ ಮಾಜಿ ಸದಸ್ಯ ಉಮೇಶ್, ಜೆ.ಕೆ.ರಮೇಶ್, ಪತ್ರಕರ್ತ ರವಿ ಬಿದನೂರು, ಮಂಜುನಾಥ ಬ್ಯಾಣದ್, ಲಿಖಿಲ್, ಖಜಾಂಚಿ ಶ್ರೀಧರ ಶೆಟ್ಟಿ, ಅಶ್ವಿನಿ ಸುಧೀಂದ್ರ ಪಂಡಿತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net