ಕರಾಟೆ ಕಲಿಕೆಯಿಂದ ದೇಹ ಸದೃಢ

18hos1p karate
ಹೊಸನಗರದಲ್ಲಿ ಏರ್ಪಡಿಸಿದ್ದ ಕರಾಟೆ ತರಬೇತಿಯನ್ನು ಮೋಹನ ಶೆಟ್ಟಿ ಉದ್ಘಾಟಿಸಿದರು. ಸದಾಶಿವ ಶ್ರೇಷ್ಠಿ, ಸುಧಾಕರ್ ಮತ್ತಿತರರಿದ್ದರು.
Published on

ಹೊಸನಗರ: ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರಲು ಕರಾಟೆ ಸಹಕಾರಿ ಎಂದು ತಾಲೂಕು ಕರಾಟೆ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಮೋಹನ್ ಶೆಟ್ಟಿ ಅಭಿಪ್ರಾಯಪಟ್ಟರು.

ಪಟ್ಟಣದ ಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಏರ್ಪಡಿಸಿದ್ದ 2025-26ನೇ ಸಾಲಿನ ಕರಾಟೆ ತರಬೇತಿ ಉದ್ಘಾಟಿಸಿ ಮಾತನಾಡಿ, ಶಿಕ್ಷಣದ ಜತೆಗೆ ವಿವಿಧ ಕ್ರೀಡೆ, ಕರಾಟೆ ಸೇರಿ ಇತರ ಚಟುವಟಿಕೆಗಳು ಅಗತ್ಯ ಎಂದು ತಿಳಿಸಿದರು. ತರಬೇತುದಾರ ಜೆ.ಕೆ.ರಾಘವೇಂದ್ರ ಮಾತನಾಡಿ, ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ಕರಾಟೆ ಶಿಕ್ಷಣ ಇದೀಗ ಗ್ರಾಮೀಣ ಪ್ರದೇಶದಲ್ಲಿ ಕೂಡ ಯಶಸ್ವಿಯಾಗಿ ನಡೆಯುತ್ತಿದೆ. ಮಕ್ಕಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಪದಕ ಗಳಿಸಿದ್ದಾರೆ ಎಂದರು.

ಶ್ರೀ ವಿಘ್ನೇಶ್ವರ ಸೇವಾ ಸಮಿತಿ ಅಧ್ಯಕ್ಷ ಸದಾಶಿವ ಶ್ರೇಷ್ಠಿ, ಕೋಡೂರು ಬ್ಲಾಸಂ ಅಕಾಡೆಮಿ ಮುಖ್ಯ ಶಿಕ್ಷಕ ಸುಧಾಕರ್, ಕರಾಟೆ ಶಿಕ್ಷಕರು, ಪಾಲಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net