

ರಿಪ್ಪನ್‌ಪೇಟೆ: ಅರಸಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೀರ್ತಿರಾಜ್ ಗೌಡ, ಉಪಾಧ್ಯಕ್ಷರಾಗಿ ಮಹಮ್ಮದ್ ಷರೀಫ್ ಅವಿರೋಧ ಆಯ್ಕೆಯಾದರು.
ಶುಕ್ರವಾರ ನಿಗದಿಯಾಗಿದ್ದ ಚುನಾವಣೆಗೆ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಅರಸಾಳು ಪಿಡಿಒ ಎಸ್.ಎಂ.ರವಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಮುಖಂಡರಾದ ಎಂ.ಎಂ.ಪರಮೇಶ, ಬಿ.ಪಿ.ರಾಮಚಂದ್ರ, ಎಚ್.ವಿ.ಈಶ್ವರಪ್ಪ ಗೌಡ, ಸಣ್ಣಕ್ಕಿ ಮಂಜು, ಅಮೀರ್ ಹಂಜ, ಸತೀಶ್, ನಾಗಾರ್ಜುನ ಸ್ವಾಮಿ, ಸುರೇಶ್ ಸಿಂಗ್, ಉಬೇದುಲ್ಲಾ ಷರೀಫ್ ಇತರರಿದ್ದರು.