ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷರಾಗಿ ಜಯಂತ್ ಆಯ್ಕೆ

24sgr2
ಸಾಗರದ ಎಂಡಿಎಫ್ ನೂತನ ಅಧ್ಯಕ್ಷ ಬಿ.ಆರ್.ಜಯಂತ್ ಅವರನ್ನು ಸನ್ಮಾನಿಸಲಾಯಿತು. ಎಚ್.ಎನ್. ವಿದ್ಯಾಧರ, ಡಾ. ಎಚ್.ಎಂ.ಶಿವಕುಮಾರ್, ಕವಲಕೋಡು ವೆಂಕಟೇಶ್ ಇತರರಿದ್ದರು.
Published on

ಸಾಗರ: ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ನೂತನ ಅಧ್ಯಕ್ಷರಾಗಿ ಬಿ.ಆರ್.ಜಯಂತ್ ಆಯ್ಕೆಯಾಗಿದ್ದಾರೆ. ಕೆ.ಎಚ್.ಶ್ರೀನಿವಾಸ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನವನ್ನು ಕೆಲ ವರ್ಷಗಳಿಂದ ಎಂ.ಹರನಾಥ ರಾವ್ ಮತ್ತಿಕೊಪ್ಪ ನಿರ್ವಹಿಸುತ್ತಿದ್ದರು. ಸರ್ವಸದಸ್ಯರ ಸಭೆಯಲ್ಲಿ ಬಿ.ಆರ್.ಜಯಂತ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಜಯಂತ್ ಎಲ್‌ಬಿ ಕಾಲೇಜಿನ ಮೊದಲ ಬ್ಯಾಚ್ ವಿದ್ಯಾರ್ಥಿ. ಎಂಡಿಎಫ್‌ನಲ್ಲಿ ಅನೇಕ ವರ್ಷಗಳಿಂದ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದು, ಎಂ.ಹರನಾಥ್‌ರಾವ್ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ನೂತನ ಅಧ್ಯಕ್ಷರನ್ನು ಶಿಮುಲ್ ಅಧ್ಯಕ್ಷ ಎಚ್.ಎನ್.ವಿದ್ಯಾಧರ ಸನ್ಮಾನಿಸಿದರು. ಕಾರ್ಯದರ್ಶಿ ಡಾ. ಎಚ್.ಎಂ.ಶಿವಕುಮಾರ್, ಕವಲಕೋಡು ವೆಂಕಟೇಶ್, ಗುರುಪಾದ, ಎಚ್.ಎಂ.ರವಿಕುಮಾರ್, ಪ್ರಕಾಶ್, ಸತ್ಯನಾರಾಯಣ, ಸುಬ್ಬರಾವ್, ವಿರೇಶ್ ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net