ಆಡಳಿತ ವೈಖರಿಯಲ್ಲಿ ಜಕ್ಕಿಯಬ್ಬೆ ಗಟ್ಟಿಗಿತ್ತಿ

30 srl ex mp visit 2
ಶಿರಾಳಕೊಪ್ಪ ಸಮೀಪದ ಬಂದಳಿಕೆ ಗ್ರಾಮಕ್ಕೆ ಮಧ್ಯಪ್ರದೇಶದ ಮಾಜಿ ಸಂಸದೆ ಮೀನಾಕ್ಷಿ ನಟರಾಜನ್ ಆಗಮಿಸಿದ್ದರು. ಸಂದೀಪ್, ರಂಗಸ್ವಾಮಿ, ನಾಗರಾಜ್ ಗೌಡ ಇತರರಿದ್ದರು.
Published on

ಶಿರಾಳಕೊಪ್ಪ: ದೇಶದ ಪ್ರಾಚೀನ ಕಾಲದಲ್ಲಿ ಮೂವರು ಸ್ತ್ರೀಯರು ಉತ್ತಮ ಆಡಳಿತಗಾರರಾಗಿ ಪ್ರಸಿದ್ಧಿ ಪಡೆದಿದ್ದು, ಕರ್ನಾಟಕದ ಬಂದಳಿಕೆ ಗ್ರಾಮದ ಜಕ್ಕಿಯಬ್ಬೆ ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದು ಮಧ್ಯಪ್ರದೇಶದ ಮಾಜಿ ಸಂಸದೆ ಮೀನಾಕ್ಷಿ ನಟರಾಜನ್ ಹೇಳಿದರು.

ಪಟ್ಟಣ ಸಮೀಪದ ಬಂದಳಿಕೆ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ರಾಜವಂಶದ ಮಹಿಳೆಯರು ಸುಲಭವಾಗಿ ಆಡಳಿತ ಮಾಡಬಹುದು. ಆದರೆ ಸಾಮಾನ್ಯ ಕುಟುಂಬದಿಂದ ಬಂದು ಆಡಳಿತ ನಡೆಸಿದ ಗಟ್ಟಿಗಿತ್ತಿ ಜಕ್ಕಿಯಬ್ಬೆ. ಅವರು ಕಟ್ಟಿಸಿದ ಶಾಂತಿನಾಥ ಬಸದಿ ಹಾಗೂ ನಾಗರ ಕೆರೆ ವೀಕ್ಷಿಸಿದೆ ಎಂದು ತಿಳಿಸಿದರು.

ನಂತರ ಬಂದಳಿಕೆಯ ತ್ರಿಮೂರ್ತಿ ನಾರಾಯಣ, ಆನೆಕಲ್ ಸೋಮೇಶ್ವರ ಸೇರಿ ಹಲವಾರು ವೀರಗಲ್ಲು, ಸಿಡಿತಲೆಗಳು, ಮಾಸ್ತಿ ಕಲ್ಲುಗಳನ್ನು ಅಧ್ಯಯನ ಮಾಡಿದರು. ಅಲ್ಲಲ್ಲಿ ಬಿದ್ದಿರುವ ಅಮೂಲ್ಯವಾದ ಶಾಸನಗಳನ್ನು ಸಂರಕ್ಷಿಸಲು ಭಾರತೀಯ ಪುರಾತತ್ವ ಇಲಾಖೆಗೆ ಮನವಿ ಸಲ್ಲಿಸುವಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ಸೂಚಿಸಿದರು.

ತಾಳಗುಂದ ಹಾಗೂ ಬಳ್ಳಿಗಾವಿ ಗ್ರಾಮದಲ್ಲಿರುವ ಐತಿಹಾಸಿಕ ದೇವಸ್ಥಾನಗಳ ಶಿಲ್ಪಕಲಾ ವೈಭೋಗ ಕಣ್ತುಂಬಿಕೊಂಡರು. ಬಳ್ಳಿಗಾವಿ ನಿರ್ವಹಣೆ ಮಾಡುತ್ತಿರುವ ಪ್ರಾಚೀನ ವಸ್ತು ಸಂಗ್ರಹಾಲಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಂದೀಪ್ ಮಾತನಾಡಿ, ಇಂತಹ ಮಹತ್ವದ ಸ್ಥಳಗಳ ಬಗ್ಗೆ ದೇಶಾದ್ಯಂತ ಪರಿಚಯಿಸುವ ಕಾರ್ಯ ಆಗಬೇಕು ಎಂದು ತಿಳಿಸಿದರು. ಚನ್ನರಾಯಪಟ್ಟಣದ ವಿಧಾನ ಪರಿಷತ್ ಮಾಜಿ ಸದಸ್ಯ ರಂಗಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗರಾಜ್ ಗೌಡ, ಬಗರ್‌ಹುಕುಂ ಕಮಿಟಿ ಸದಸ್ಯ ಸುನಿಲ್ ಜೆ. ಫಕೀರಪ್ಪ, ಗ್ರಾಪಂ ಸದಸ್ಯೆ ಲತಾ, ಉಮೇಶ್ ಮಾರವಳ್ಳಿ, ಬಿಸಲಳ್ಳಿ ಪ್ರಭು ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net