ಮನಸ್ಸು ಶುದ್ಧವಿದ್ದಲ್ಲಿ ಸತ್ವಯುತ ಜೀವನ

1 skp 4
ಶಿಕಾರಿಪುರದ ಬ್ರಹ್ಮಕುಮಾರಿ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸ್ನೇಹಕ್ಕ, ಬಿ.ಎಲ್.ರಾಜು, ಎನ್.ವಿ.ಈರೇಶ್, ಸುಧೀರ್, ಕಾಂಚನಾ ಕುಮಾರ್, ಕೋಮಾಲಾಚಾರ್ ಇತರರಿದ್ದರು.
Published on

ಶಿವಮೊಗ್ಗ: ಬದುಕು ಅನುಭವಗಳ ಸಂಗಮ. ಪರಿಶುದ್ಧ ಮನಸ್ಸು ಇದ್ದಲ್ಲಿ ಸತ್ವಯುತ ಜೀವನ ನಡೆಸಲು ಸಾಧ್ಯ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ನಿರ್ದೇಶಕ ಎನ್.ವಿ.ಈರೇಶ್ ಹೇಳಿದರು.

ಶಿಕಾರಿಪುರದ ಬ್ರಹ್ಮಕುಮಾರಿ ವಿದ್ಯಾಲಯದಲ್ಲಿ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಜಗತ್ತಿನಾದ್ಯಂತ ಇಂತಹ ಆಧ್ಯಾತ್ಮಿಕ ಕೇಂದ್ರಗಳು ಧರ್ಮೋತ್ಥಾನ ಕಾರ್ಯ ಮಾಡುತ್ತಿವೆ. ಒಳ್ಳೆಯ ಸಂದೇಶಗಳನ್ನು ಮನೆ ಮನೆಗಳಿಗೆ ತಲುಪಿಸುತ್ತಿವೆ ಎಂದು ತಿಳಿಸಿದರು.

ಅಧ್ಯಾತ್ಮ ಚಿಂತನೆಗಳು ನಮ್ಮನ್ನು ಮಾನವತ್ವದಿಂದ ದೈವತ್ವದ ಕಡೆಗೆ ಕರೆದೊಯ್ಯುತ್ತವೆ. ಸದಾಶಯಗಳಿಂದ ಬದುಕು ಸಾರ್ಥಕ್ಯ ಕಾಣುತ್ತದೆ. ಧರ್ಮ ಕಾರ್ಯಗಳು ಹೆಚ್ಚಾಗಬೇಕು ಎಂದರು.

ಶಿಕಾರಿಪುರದ ಬ್ರಹ್ಮಕುಮಾರಿ ವಿದ್ಯಾಲಯದ ಸಂಚಾಲಕಿ ಸ್ನೇಹಕ್ಕ, ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ, ತಾಲೂಕು ಅಧ್ಯಕ್ಷ ಬಿ.ಎಲ್.ರಾಜು, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಸುಧೀರ್, ಕಾಂಚನಾ ಕುಮಾರ್, ಅಂಗಡಿ ಜಗದೀಶ್, ಜಿ.ಕೆ.ಹೆಬ್ಬಾರ್, ಕೋಮಲಾಚಾರ್, ಕರವೇ ಸ್ವಾಭಿಮಾನಿ ಬಣದ ಗೌರವಾಧ್ಯಕ್ಷ ಶಿವಯ್ಯ ಶಾಸ್ತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net