ಮಲೆನಾಡಲ್ಲಿ ಹೋಳಿ ಸಂಭ್ರಮಕ್ಕೆ ಕರೊನಾ ಕೊಂಚ ಬ್ರೇಕ್

IMG_7821 (1)
Published on

ಶಿವಮೊಗ್ಗ: ಕಳೆದ ವರ್ಷದಂತೆ ಈ ಬಾರಿಯೂ ಕರೊನಾ ಆತಂಕದ ಹಿನ್ನೆಲೆಯಲ್ಲಿ ಸಡಗಡ ಸಂಭ್ರಮದಿಂದ ಆಚರಿಸುತ್ತಿದ್ದ ಬಣ್ಣದ ಹಬ್ಬ ಹೋಳಿ ಆಚರಣೆಗೆ ಮಲೆನಾಡಿನಲ್ಲಿ ಕೊಂಚ ಬ್ರೇಕ್ ಬಿದ್ದಿತ್ತು. ಸೋಮವಾರವೂ ಹಲವೆಡೆ ಮಾತ್ರ ಹೋಳಿ ಹಬ್ಬ ಆಚರಿಸಿ ಜನರು ಸಂಭ್ರಮಿಸಿದರು. ಬಹುತೇಕ ಮಂದಿ ಬಣ್ಣದಾಟದಿಂದ ದೂರವೇ ಉಳಿದರು.
ಶಿವಮೊಗ್ಗ ನಗರದಲ್ಲಿ ಹೋಳಿ ಹಬ್ಬದ ಸಡಗರ ಪ್ರತಿ ವರ್ಷ ಹೆಚ್ಚಾಗಿಯೇ ಇರುತ್ತಿತ್ತು. ಬಣ್ಣದ ಓಕುಳಿಯಲ್ಲಿ ಜನರು ಮಿಂದೆಳುತ್ತಿದ್ದರು. ಆದರೆ ಬೆರಳೆಣಿಕೆಯಷ್ಟು ಜನರು ಮಾತ್ರ ಈ ಬಾರಿ ಹೋಳಿ ಸಂಭ್ರಮದಲ್ಲಿ ಮೈ ಮರೆತರು. ವಿವಿಧ ಬಡಾವಣೆಗಳಲ್ಲಿ ಬಣ್ಣದೋಕುಳಿ ಚಿತ್ತಾರ ಮೂಡಿತ್ತು.
ಉತ್ತರ ಭಾರತೀಯರೇ ಹೆಚ್ಚಿರುವ ಗಾಂಧಿಬಜಾರ್, ರಾಮಣ್ಣ ಶ್ರೇಷ್ಠಿ ಪಾರ್ಕ್, ಎಸ್‌ಪಿಎಂ ರಸ್ತೆಗಳಲ್ಲಿ ಬೀದಿಗಿಳಿದು ಬಣ್ಣ ಎರಚಿಕೊಂಡು ಹೋಳಿ ಶುಭಾಶಯ ಕೋರಿದರು. ಉಳಿದಂತೆ ದುರ್ಗಿಗುಡಿ, ಎನ್‌ಟಿ ರಸ್ತೆ, ಓಟಿ ರಸ್ತೆ, ಗೋಪಾಳ ಸೇರಿ ಹಲವೆಡೆ ಹೋಳಿ ಆಚರಣೆ ಹೆಚ್ಚಿತ್ತು. ಪುಟಾಣಿಗಳು ಕೂಡ ಹೋಳಿ ಸಂಭ್ರಮದಲ್ಲಿ ಹಿಂದೆ ಬೀಳಲಿಲ್ಲ.
ಅಲ್ಲಲ್ಲಿ ಯುವಕ ಯುವತಿಯರು ಗುಂಪು ಗುಂಪಾಗಿ ತೆರಳಿ ಪರಸ್ಪರ ಬಣ್ಣ ಎರಚಿಕೊಂಡಿದ್ದು ಮಾತ್ರವಲ್ಲದೇ ತಮ್ಮ ಸ್ನೇಹಿತರು, ಸಂಬಂಧಿಕರಿಗೆ ಬಣ್ಣ ಹಾಕಲು ಬೈಕ್, ಸ್ಕೂಟರ್‌ಗಳಲ್ಲಿ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net