ಕರಕುಶಲ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸಿ

5sgr2
ಸಾಗರದ ಅಜಿತ ಸಭಾಭವನದಲ್ಲಿ ಮೈಸೂರು ಗುಡಿಗಾರರ ಸಹಕಾರ ಸಂಘದಿಂದ ಏರ್ಪಡಿಸಿದ್ದ ಹಿರಿಯ ಕುಶಲಕುರ್ಮಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಲೋಕೇಶ್‌ಕುಮಾರ್ ಗುಡಿಗಾರ್ ಉದ್ಘಾಟಿಸಿದರು. ಎಸ್.ಆರ್.ಪ್ರಭಾಕರ್, ಎಸ್.ಎನ್.ರಂಗನಾಥ್ ಇತರರಿದ್ದರು.
Published on

ಸಾಗರ: ಕರಕುಶಲ ಕಲೆಯು ಒಂದು ಸಂಸ್ಕೃತಿ. ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಆಗಬೇಕು ಎಂದು ಮೈಸೂರು ಗುಡಿಗಾರರ ಸಹಕಾರ ಸಂಘದ ಅಧ್ಯಕ್ಷ ಲೋಕೇಶ್‌ಕುಮಾರ್ ಗುಡಿಗಾರ್ ಹೇಳಿದರು.

ನಗರದ ಅಜಿತ ಸಭಾಭವನದಲ್ಲಿ ಮೈಸೂರು ಗುಡಿಗಾರರ ಸಹಕಾರ ಸಂಘದಿಂದ ಏರ್ಪಡಿಸಿದ್ದ ಹಿರಿಯ ಕುಶಲಕುರ್ಮಿಗಳಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಸಂಘ 110 ವರ್ಷ ಪೂರೈಸಿದೆ ಎನ್ನುವುದು ಹೆಮ್ಮೆಯ ಸಂಗತಿ. ಮಹಾತ್ಮ ಗಾಂಧಿ, ಮೈಸೂರು ಮಹಾರಾಜರು ನಮ್ಮ ಸಂಸ್ಥೆಗೆ ಭೇಟಿ ನೀಡಿದ ದಾಖಲೆ ಇದೆ. ಇಂತಹ ಸಂಸ್ಥೆಯನ್ನು ಮುತುವರ್ಜಿಯಿಂದ ಕೊಂಡೊಯ್ಯಬೇಕು. ಇಂದಿನ ಯುವಪೀಳಿಗೆ ಕರಕುಶಲ ಕಲೆಯಿಂದ ವಿಮುಖರಾಗುತ್ತಿರುವುದು ಬೇಸರ ತರಿಸಿದೆ. ಆದರೆ ಈ ಕಲೆಯಿಂದ ಜೀವನ ನಿರ್ವಹಣೆ ಸಾಧ್ಯವಿಲ್ಲ ಎನ್ನುವುದು ಅವರ ಉದ್ದೇಶ. ಸರ್ಕಾರ ಕರಕುಶಲ ಕಲೆ, ಕಲಾವಿದರ ಕುಟುಂಬದ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಬೇಕು ಎಂದರು.

ಸಂಘ ಶತಮಾನೋತ್ಸವ ಪೂರೈಸಿರುವ ಹಿನ್ನೆಲೆಯಲ್ಲಿ ಸುಸಜ್ಜಿತ ಶತಮಾನೋತ್ಸವ ಭವನ ನಿರ್ಮಿಸಲು ಹಿರಿಯರು ಸಲಹೆ ನೀಡಿದ್ದು, ನಮ್ಮ ಸಮಿತಿಯು ಪರಿಗಣಿಸಿ ಗಮನ ಹರಿಸುತ್ತಿದೆ. ಶತಮಾನೋತ್ಸವ ಭವನದಲ್ಲಿ ಅಪೂರ್ವ ಕಲಾಕೃತಿಗಳ ಪ್ರದರ್ಶನ, ಕರಕುಶಲ ಕಲೆ ನಾಡಿಗೆ ನೀಡಿದ ಕೊಡುಗೆ ಇತರ ವಿಷಯಗಳ ಕುರಿತು ಪ್ರದರ್ಶನ ನಿರ್ಮಿಸುವ ಉದ್ದೇಶ ಹೊಂದಲಾಗಿದೆ.

ಲೋಕೇಶ್‌ಕುಮಾರ್ ಗುಡಿಗಾರ್

ಮೈಸೂರು ಗುಡಿಗಾರರ ಸಹಕಾರ ಸಂಘದ ಅಧ್ಯಕ್ಷ

ಹಿರಿಯ ಕುಶಲಕರ್ಮಿ ಎಸ್.ಸಿ.ರಮೇಶ್ ಸಾಗರ, ಮಧುರಾ ಸತ್ಯನಾರಾಯಣ ಸೊರಬ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳನ್ನು ಪುರಸ್ಕರಿಸಲಾಯಿತು.

ಉಪಾಧ್ಯಕ್ಷ ಎಸ್.ಆರ್.ಪ್ರಭಾಕರ್, ನಿರ್ದೇಶಕ ಎಸ್.ಎನ್.ರಂಗನಾಥ್, ಎಸ್.ಜಿ.ವಿನಾಯಕ, ಎಸ್.ಎಂ.ನಾಗರಾಜ್, ಬಿ.ರಂಗನಾಥ ಗುಡಿಗಾರ್, ಕೃಷ್ಣಮೂರ್ತಿ ಗುಡಿಗಾರ್, ಕೃಷ್ಣಮೂರ್ತಿ ಕೆ. ಗುಡಿಗಾರ್, ಟಿ.ಡಿ.ಶೇಷಾದ್ರಿ, ಮೀನಾಕ್ಷಿ, ಎಸ್.ಎನ್.ಸುಬ್ರಹ್ಮಣ್ಯ, ಸ್ಮಿತಾ ದೇವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net