ಶಿಕ್ಷಣದ ಜತೆ ಕ್ರೀಡೆಗೂ ಆದ್ಯತೆ ನೀಡಿ

31hos3p jimmi
ಹೊಸನಗರದ ನೆಹರು ಮೈದಾನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಎಂ.ಎನ್.ಸುಧಾಕರ್ ಉದ್ಘಾಟಿಸಿದರು. ಉಲ್ಲಾಸ್, ಕೆ.ಇಲಿಯಾಸ್, ರವಿಕುಮಾರ್ ಇತರರಿದ್ದರು.
Published on

ಹೊಸನಗರ: ಕ್ರೀಡೆಗಳು ಮಕ್ಕಳ ಮಾನಸಿಕ ಬೆಳವಣಿಗೆಗೆ ಸಹಕಾರಿ. ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣದ ಜತೆಗೆ ಕ್ರೀಡೆಗೂ ಮಹತ್ವ ನೀಡಬೇಕು ಎಂದು ಹೊಸನಗರ ಜಿಮ್ಮಿ ಜಾರ್ಜ್ ವಾಲಿಬಾಲ್ ಕ್ಲಬ್ ಅಧ್ಯಕ್ಷ ಎಂ.ಎನ್.ಸುಧಾಕರ್ ಹೇಳಿದರು.

ಪಟ್ಟಣದ ನೆಹರು ಮೈದಾನದಲ್ಲಿ ನೆಹರು ಯುವ ಕೇಂದ್ರ ಶಿವಮೊಗ್ಗ, ಜಿಮ್ಮಿ ಜಾರ್ಜ್ ವಾಲಿಬಾಲ್ ಕ್ಲಬ್ ಹೊಸನಗರ ಸಂಯುಕ್ತ ಆಶಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಕ್ರೀಡಾಕೂಟಗಳಲ್ಲಿ ಗೆಲುವು ಸೋಲು ಸಹಜ. ಎರಡನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ಕ್ರೀಡಾಪಟುಗಳಲ್ಲಿ ಇರಬೇಕು. ತೀರ್ಪುಗಾರರ ತೀರ್ಪನ್ನ ಗೌರವಿಸುವ ಕೆಲಸವನ್ನು ಮಾಡಬೇಕು. ಶಿಕ್ಷಣದಂತೆ ಕ್ರೀಡೆಯು ಸಹ ವಿದ್ಯಾರ್ಥಿ ಜೀವನದ ಬಹು ಮುಖ್ಯ ಭಾಗವಾಗಿರುತ್ತದೆ. ಕ್ರೀಡಾಪಟುಗಳು ದುಶ್ಚಟಗಳಿಗೆ ದಾಸರಾಗದೆ ಕ್ರೀಡೆಯನ್ನು ರೂಡಿಸಿಕೊಂಡಲ್ಲಿ ಭವಿಷ್ಯದಲ್ಲಿ ಉತ್ತಮ ಸ್ಥಾನ ಪಡೆದುಕೊಳ್ಳಬಹುದು ಎಂದರು.

ಅಧಿಕಾರಿ ಉಲ್ಲಾಸ್, ಜಿಮ್ಮಿ ಜಾರ್ಜ್ ಸಂಸ್ಥೆ ಸದಸ್ಯ ಕೆ.ಇಲಿಯಾಸ್, ರವಿಕುಮಾರ್, ಗಣೇಶ್, ಅಖಿಲೇಶ್, ದೈಹಿಕ ಶಿಕ್ಷಕ ಸುಹಾಸ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net