

ಸೊರಬ: ಚಂದ್ರಗುತ್ತಿ ಗ್ರಾಮದಲ್ಲಿ ಶ್ರೀ ಮರಳೋಣಿ ಮಹಾಗಣಪತಿ ದೇವಸ್ಥಾನದಲ್ಲಿ ಗಣೇಶ ಜಯಂತಿ ಅಂಗವಾಗಿ ಪೂಜಾ ಕಾರ್ಯಕ್ರಮಗಳು ಜರುಗಿದವು.
ಮಹಾಗಣಪತಿ ದೇವರಿಗೆ ಜಯಂತಿ ವಿಶೇಷವಾಗಿ ಪೂಜೆ, ಹೋಮ ಹವನ, ಕಳಶ ಸ್ಥಾಪನೆ, ಅಥರ್ವ ಶೀರ್ಷ ಹೋಮ, ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ನೆರವೇರಿತು. ಅರ್ಚಕ ನಿರಂಜನ್ ಭಟ್, ಕೃಷ್ಣ ಭಟ್, ಸಂಜು ಭಟ್ ಅವರು ವಿವಿಧ ಪೂಜಾ ಕಾರ್ಯಗಳು ನೆರವೇರಿಸಿದರು.
ಗಣೇಶ ಜಯಂತಿ ಅಂಗವಾಗಿ ಚಂದ್ರಗುತ್ತಿ ಸೇರಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು. ಮಹಾಗಣಪತಿಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.