

ಸೊರಬ: ತಾಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಶ್ರೀ ಸಿದ್ದವೃಷಭೇಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವ ಫೆ. 7ರಿಂದ 12ರವರೆಗೆ ನಡೆಯಲಿದೆ ಎಂದು ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಜಡೆ ಸಂಸ್ಥಾನ ಮಠದ ಅವರಣದಲ್ಲಿ ಶ್ರೀ ಸಿದ್ದವೃಷಭೇಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾತ್ರಾ ಮಹೋತ್ಸವದ ಪ್ರಯುಕ್ತ ಜಡೆ ಸಂಸ್ಥಾನ ಮಠದ ಆವರಣದಲ್ಲಿ ಕುಮಾರಪ್ರಭು ವೇದಿಕೆಯಲ್ಲಿ ಬೂದಿಹಾಳದ ಶ್ರೀ ಪುಟ್ಟರಾಜ ಗವಾಯಿಗಳ ಶಿಷ್ಯ ಶ್ರೀ ಗವಿಸಿದ್ದೇಶ್ವರ ಶಾಸಿಗಳಿಂದ ಪ್ರವಚನ ನಡೆಯಲಿದೆ. ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ರಾಜಯೋಗೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ತಿಳಿಸಿದರು.
ಶ್ರೀ ಸಿದ್ದವೃಷಭೇಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವದಂದು ಸ್ವಾಮೀಜಿಗಳ ಗದ್ದುಗೆಗೆ ರುದ್ರಾಭಿಷೇಕ, ಚೌಡೇಶ್ವರಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿ, ಶಿವದೀಕ್ಷೆ, ರಥೋತ್ಸವ, ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಭಾವ ಸಂಗಮ, ಹರಕೆ ಸಮರ್ಪಣೆ, ಪ್ರಸಾದ, ದಾಸೋಹ, ಭಾವೈಕ್ಯ ಸಮ್ಮೇಳನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದರು.
ಅಖಿಲ ಭಾರತ ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಗುರು ಕುಮಾರ್ ಪಾಟೀಲ್, ನಿಕಟಪೂರ್ವ ಅಧ್ಯಕ್ಷ ಬಸವರಾಜ್ ಭಾರಂಗಿ, ಮಲ್ಲಿಕಾರ್ಜುನ ದ್ವಾರಹಳ್ಳಿ, ಜಯಶೀಲ ಗೌಡ, ಕುಮಾರ ಉರ್ಣಕರ್, ವೆಂಕಟೇಶ್ ಕಾಮತ್, ಪ್ರದೀಪ್, ನಾಗರಾಜ ಗೌಡ ಅಲಹಳ್ಳಿ, ಗುರು ಪ್ರಸನ್ನ ಗೌಡ, ಗಂಗಾಧರಪ್ಪ, ಮುಡುಪಣ್ಣ, ವಿರೇಂದ್ರ ಪಾಟೀಲ್, ಗೀತಾ ಮಲ್ಲಿಕಾರ್ಜುನ, ಸುಧಾ, ಮಮತಾ, ಸುಮಾ, ರೇವಣಪ್ಪ, ಕುಮಾರ್, ರಾಜುಗೌಡ, ಸಂತೋಷ್, ಪ್ರಕಾಶ್ ಗೌಡ, ನಿಂಗಪ್ಪ ಗೌಡ, ಜಗದೀಶ್ ಗೌಡ, ಅನಿಲ್ ಇತರರಿದ್ದರು.