ಸ್ವಇಚ್ಛೆಯಿಂದ ರಕ್ತದಾನ ಮಾಡಿ

9sor1
ಸೊರಬದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಶಿಬಿರದಲ್ಲಿ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಪ್ರಾಚಾರ್ಯೆ ಡಾ. ನೇತ್ರಾವತಿ, ಜೆ.ಪ್ರಕಾಶ್, ಹೂವಪ್ಪ, ಶ್ರೀಕಾಂತ್ ಇತರರಿದ್ದರು.
Published on

ಸೊರಬ: ರಕ್ತದಾನ ಮಾಡುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಸಾಧ್ಯ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯೆ ಡಾ. ನೇತ್ರಾವತಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕ, ಯುವ ರೆಡ್‌ಕ್ರಾಸ್, ರೋವರ್ಸ್‌ ಮತ್ತು ರೇಂಜರ್ಸ್‌, ಶಿವಮೊಗ್ಗ ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆಯ ರಕ್ತ ಕೇಂದ್ರದಿಂದ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ರಕ್ತದಾನ ಮಾಡುವುದರಿಂದ ಜೀವ ಉಳಿಸಿದ ಪುಣ್ಯ ಲಭಿಸುತ್ತದೆ. ಆರೋಗ್ಯಕ್ಕೂ ಅನೇಕ ಉಪಯೋಗಗಳಿವೆ. ದೇಹದಲ್ಲಿನ ಒತ್ತಡ ಕಡಿಮೆ ಮಾಡಲು ಮತ್ತು ನಕಾರಾತ್ಮಕ ಭಾವನೆ ತೊಡೆದುಹಾಕಲು ಸಹಕಾರಿಯಾಗಿದೆ. ಹಾಗಾಗಿ ಸ್ವಇಚ್ಛೆಯಿಂದ ರಕ್ತದಾನ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.

ಕಾಲೇಜಿನಲ್ಲಿ 43 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಜೆ.ಪ್ರಕಾಶ್, ಸದಸ್ಯರಾದ ಹೂವಪ್ಪ, ಶ್ರೀಕಾಂತ್, ಮೆಗ್ಗಾನ್ ವೈದ್ಯರಾದ ಡಾ. ಅಶ್ವಿನಿ, ಡಾ. ವೈಶಾಖಿ, ರಕ್ತನಿಧಿ ಕೇಂದ್ರದ ಹನುಮಂತಪ್ಪ, ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net